

ಮೂಡಿಗೆರೆ: ಪಟ್ಟಣದ ಮೂರು ಹೊಸ ಬಡಾವಣೆಗಳಿಗೆ ಅನುಮತಿ ನೀಡಿರುವ ಬಗ್ಗೆ
ಗಂಭೀರ ಚರ್ಚೆ, ಆರೋಪ, ಪ್ರತ್ಯಾರೋಪಕ್ಕೆ ಪಟ್ಟಣ ಪಂಚಾಯಿತಿ ಅವರಣದಲ್ಲಿ
ನಡೆದ ಸಾಮಾನ್ಯ ಸಭೆ ಸಾಕ್ಷಿಯಾಯಿತು.
2023ರ ಅಕ್ಟೋಬರ್ 18 ಹಾಗೂ 2024ರ ಜನವರಿ 25,ಜೂನ್ 28ರಂದು
ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ ಎಂದು ಸುಳ್ಳು ನಡಾವಳಿ
ತಯಾರಿಸಲಾಗಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಒಂದೂ ಸಭೆ ನಡೆದಿಲ್ಲ.
ಮೂರು ಸಭೆ ನಡೆದಿದೆ ಎಂದು ನಮೂದಿಸಿರುವ ನಿರ್ಣಯ, ಕಳೆದ ಬಾರಿಯ
ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯ ಸೇರಿದಂತೆ 4 ಸಭೆ ನಡಾವಳಿಯನ್ನು
ಇವತ್ತಿನ ಸಭೆಯಲ್ಲಿ ಓದಿ ಹೇಳುವಂತೆ ಬಿಜೆಪಿಯ ಐವರು ಸದಸ್ಯರು ಒತ್ತಾಯಿಸಿದಾಗ
ಹಳೇ ಸಭಾ ನಡಾವಳಿ ಪುಸ್ತಕವನ್ನು ಈ ಸಭೆಯಲ್ಲಿ ಓದಲು ಅವಕಾಶ ನೀಡುವುದಿಲ್ಲ
ಕಾಂಗ್ರೆಸ್ ಸದಸ್ಯ ಹೇಳಿದಾಗ ಆಕ್ರೋಶ ಗೊಂಡ ಬಿಜೆಪಿ ಸದಸ್ಯರು ಸಭೆ ನಡುವೆಯೆ
ಪ್ರತಿಭಟನೆ ನಡೆಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತಲೆಕೆಡಿಸಿಕೊಳ್ಳದೆ ಸಭೆ
ಮುಂದುವರೆಸಿದಾಗ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದರು. ಈ ಪೈಕಿ
ಮನೋಜ್ ಕುಮಾರ್, ಆಶಾ ಮೋಹನ್, ಕಮಲಮ್ಮ ಪಪಂ ಕಚೇರಿ ಆವರಣದಲ್ಲಿ
ಸಂಜೆಯವರೆಗೂ ಉಪವಾಸ ಕುಳಿತು ಧರಣಿ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಬಿಜೆಪಿ ಸದಸ್ಯ ಮನೋಜ್ ಕುಮಾರ್ ಮಾತನಾಡಿ,
ಪಟ್ಟಣ ಪಂಚಾಯಿತಿ ಮೊದಲ ಅಧ್ಯಕ್ಷರ ಅವಧಿ ಮುಗಿದ ಬಳಿಕ 15 ತಿಂಗಳು
ಆಡಳಿತಾಧಿಕಾರಿ ಅಧಿಕಾರ ನಡೆಸಿದ್ದಾರೆ. ಅವರ ಅವಧಿಯಲ್ಲಿ ಮೂರು ಸಭೆ ನಡೆದಿದೆ
ಎಂದು ಸುಳ್ಳು ನಡಾವಳಿ ತಯಾರಿಸಿದ್ದಾರೆ. ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದೂ
ಸಭೆ ನಡೆಸಿಲ್ಲ. ಅವರು ಸಭೆ ನಡೆಸಿದ್ದರೆ ಸದಸ್ಯರನ್ನು ಆಹ್ವಾನಿಸಬೇಕಿತ್ತು.
ಸದಸ್ಯರನ್ನು ಆಹ್ವಾನಿಸದೆ ಸಭೆ ನಡೆಸುವಂತಿಲ್ಲ. ನಕಲಿ ನಿರ್ಣಯದಲ್ಲಿ
ಆಡಳಿತಾಧಿಕಾರಿ ಮತ್ತು ಸದಸ್ಯರ ಸಹಿ ಇಲ್ಲ. ಪಪಂ ಮುಖ್ಯಾಧಿಕಾರಿ ಸಹಿ ಮಾತ್ರ
ನಮದಾಗಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ
ದೂರು ನೀಡಲಾಗಿದೆ ಎಂದರು.
ಧರಣಿ ವೇಳೆ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ, ಪ್ರಶಾಂತ್ ಇದ್ದರು.