

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬೆಳ್ತಂಗಡಿಯಲ್ಲಿ 7 ಕೋಟಿ ರೂ. ಮೊತ್ತದ ಅಂಬೇಡ್ಕರ್ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ನೀಲಿನಕ್ಷೆ ಸಿದ್ಧಗೊಂಡಿದೆ. ಸದ್ಯದಲ್ಲೇ ಶಿಲಾನ್ಯಾಸ ನೆರವೇರುವ ನಿರೀಕ್ಷೆ ಇದೆ.
ಬೆಳ್ತಂಗಡಿ ಕೆಲ್ಲಗುತ್ತಿನ 10 ಎಕರೆ ಸ್ಥಳದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣವಾಗಲಿದೆ. ಈಗ ಇರುವ ತಾಲೂಕು ಕ್ರೀಡಾಂಗಣದ 2.48 ವಿಸ್ತೀರ್ಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಈ ಜಾಗವು ಯುವಜನ ಕ್ರೀಡಾ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡು ಕಾಮಗಾರಿ ಆರಂಭವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ 3 ಕೋಟಿ ರೂ. ಅನುದಾನ ೋಷಿಸಿದ್ದಾರೆ. 60 ಲಕ್ಷ ರೂ. ಹೆಚ್ಚುವರಿ ಅನುದಾನ ದೊರಕಲಿದೆ.
ಅಂಬೇಡ್ಕರ್ ಭವನದ ಕಟ್ಟಡದ ಒಂದು ಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ ಇನ್ನೊಂದು ಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸಲಿದ್ದು, ಅಂಬೇಡ್ಕರ್ ಭವನವನ್ನು ವರ್ಷದುದ್ದಕ್ಕೂ ಸಕ್ರಿಯವಾಗಿಡುವ, ಸ್ವಚ್ಛತೆ ಕಾಪಾಡುವ ದೃಷ್ಟಿಕೋನ ಇದಾಗಿದೆ. ಬೆಳ್ತಂಗಡಿಯಲ್ಲಿ ಈಗಿರುವ ಅಂಬೇಡ್ಕರ್ ಭವನ ಚಿಕ್ಕದಾಗಿದ್ದು, ಇಲ್ಲಿ ಕೆಲವೊಂದು ಸಮಸ್ಯೆಗಳಿದ್ದು ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಜನರಿಗೆ ಅನುಕೂಲ
3.60 ಕೋಟಿ ರೂ. ಅನುದಾನ ಈಗಾಗಲೇ ಮಂಜೂರುಗೊಂಡಿದೆ. ಆದರೆ ಈ ಅಂಬೇಡ್ಕರ್ ಭವನವನ್ನು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ರೂಪುರೇಷೆ ಸಿದ್ಧಗೊಂಡಿದೆ. ಇದಕ್ಕೆ ಬೇಕಾಗಿರುವ ಉಳಿದ ಅನುದಾನವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಂಪನಿಗಳ ಸಿಎಸ್‌ಆರ್ ಫಂಡ್‌ಗಳಿಂದ ನೀಡುವಂತೆ ಮನವಿ ಸಲ್ಲಿಸಲಾಗುವುದು ಹಾಗೂ ಸರ್ಕಾರಕ್ಕೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು. ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ಸಿಗಲಿರುವ 25 ಕೋಟಿ ರೂ. ಅಭಿವೃದ್ಧಿ ಅನುದಾನದಲ್ಲೂ ಸ್ವಲ್ಪ ಪಾಲನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಡಲಾಗುವುದು. ಹೀಗೆ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸುವ ಯೋಜನೆ ಇದಾಗಿದೆ.
ಏನೇನು ಇರಲಿದೆ...?
ಅಂಬೇಡ್ಕರ್ ಭವನದಲ್ಲಿ 500 ಜನರ ಸಭಾಭವನ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಚೇರಿ, ಕಾಂಪೌಂಡ್, ಸುಸಜ್ಜಿತ ಪಾರ್ಕಿಂಗ್, ಅಂಬೇಡ್ಕರ್ ಜೀವನಕ್ಕೆ ಪೂರಕವಾದ ಗ್ರಂಥಾಲಯ, ಪಾರ್ಕ್, ವಾಕಿಂಗ್ ಟ್ರ್ಯಾಕ್, ಗಾರ್ಡನ್ ಹಾಗೂ ಅಗತ್ಯ ಸೌಲಭ್ಯಗಳಿಗೆ ಆದ್ಯತೆ ನೀಡಿ ನಿರ್ಮಿಸಲಾಗುತ್ತದೆ. ಇಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಆದಾಯ ಗಳಿಸುವ ಯೋಚನೆ ಇದೆ. ಶಾಸಕರ ಕೊಠಡಿ ನಿರ್ಮಾಣಕ್ಕೂ ಬೇಡಿಕೆ ಬಂದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ.
ರಾಜಕೀಯರಹಿತವಾಗಿ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು. ಈ ಬಗ್ಗೆ ಮುಖಂಡರ ಅಭಿಪ್ರಾಯ ಪಡೆದು ಅಂತಿಮ ಹಂತದ ಯೋಜನೆ ರೂಪಿಸಿ ಆದಷ್ಟು ಶೀಘ್ರ ಶಿಲಾನ್ಯಾಸ ನಡೆಸಲಾಗುವುದು. ಸಂಸದ ಕ್ಯಾ.ಬ್ರಿಜೇಶ್ ಚೌಟ 50 ಲಕ್ಷ ರೂ. ಅನುದಾನ ನೀಡುವ ಕುರಿತು ತಿಳಿಸಿದ್ದಾರೆ. ಇಲ್ಲಿ ಅಂಬೇಡ್ಕರ್ ಅವರ ಜೀವನದ ಅಧ್ಯಯನಕ್ಕೆ ಅನುಕೂಲವಾಗುವಂತಹ ಗ್ರಂಥಾಲಯ ನಿರ್ಮಾಣವಾಗಲಿದೆ. ಹರೀಶ್ ಪೂಂಜ, ಶಾಸಕ ಬೆಳ್ತಂಗಡಿಗೆ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಅಗತ್ಯ. ಉತ್ತಮ ಯೋಜನೆ ರೂಪಿಸಿ ಸಮಾಜದ ಬಂಧುಗಳಿಗೆ ಅನುಕೂಲ ಕಲ್ಪಿಸಲು ಶಾಸಕರು ಮುಂದಾಗಿರುವುದು ಶ್ಲಾನೀಯ. ಇದು ಅಂಬೇಡ್ಕರ್‌ಗೆ ನೀಡಿದ ವಿಶಿಷ್ಟ ಗೌರವವಾಗಿದೆ. ರಾಜೇಶ್ ಕಳೆಂಜ, ದಲಿತ ಸಂಘಟನೆ ಮುಖಂಡ