ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪೂರ್ವ ತಯಾರಿ ಮುಖ್ಯ

college event inaugurated by guests
Published on

ಹಿರೇಕೆರೂರ: ಸಾಧನೆ ಮಾಡಲು ಓದು ಅನಿವಾರ್ಯ. ಓದುವ ಹವ್ಯಾಸ ಬೆಳಸಿಕೊಂಡರೆ ಯಶಸ್ಸು ಸುಲಭ ಎಂದು ಧಾರವಾಡದ ಮೇರು ಸ್ಟಡಿ ಸೆಂಟರ್​ನ ನಿರ್ದೇಶಕ ಡಾ. ರುದ್ರೇಶ ಮೇಟಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2022-23ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಬಿ.ಎ, ಬಿ.ಕಾಂ., ಬಿ ಎಸ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡೆದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಪಿ.ಗೌಡರ ಅಧ್ಯಕ್ಷತೆ ವಹಿಸಿದ್ದರು.

ಶಂಭುಲಿಂಗ ತಂಬಾಕದ, ದುರ್ಗೆಶ ತಿರಕಪ್ಪನವರ, ಪಪಂ ಸದಸ್ಯರಾದ ವಿಜಯಶ್ರೀ ಬಂಗೇರ, ರಮೇಶ ಕೋಡಿಹಳ್ಳಿ, ಸನಾಉಲ್ಲಾ ಮಕಾನದಾರ, ಕವಿತಾ ಹಾರ್ನಳ್ಳಿ, ದಿಲಶಾದಿ ಬಳಿಗಾರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net