ಕೌಶಲ್ಯ ರೋಜ್‌ಗಾರ ಉದ್ಯೋಗ ಮೇಳದ ಸಿದ್ಧತೆ ಪರಿಶೀಲನೆ

6 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರ್ಕಾರದ ನಿರ್ದೇಶನದಂತೆ ಮಾ. 9ರಂದು ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ಕೌಶಲ್ಯ ರೋಜ್‌ಗಾರ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಕೆಸಿಡಿ ಆವರಣಕ್ಕೆ ಗುರುವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶಿಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಉದ್ಯೋಗ ಮೇಳದ ನೋಂದಣಿ ಪ್ರಕ್ರಿಯೆಯನ್ನು ಫೆ. 25ರಿಂದ ಆರಂಭಿಸಲಾಗಿದೆ. ಇದುವರೆಗೆ ಸುಮಾರು 4,000 ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಮಾ. 7 ಕೊನೆಯ ದಿನವಾಗಿದೆ. 9ರಂದು ನಡೆಯುವ ಮೇಳದ ಸ್ಥಳದಲ್ಲೂ ನೋಂದಣಿ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ. ವಿವಿಧ ಕಂಪನಿಗಳು ಬೇಡಿಕೆಗಳಿಗೆ ಅನುಗುಣವಾಗಿ 65 ಕೈಗಾರಿಕೆಗಳು, 25 ಮಾನವ ಸಂಪನ್ಮೂಲ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಾಯಿಸಿಕೊ0ಡಿವೆ. ವಿವಿಧ ಕೌಶಲ್ಯ ಹಾಗೂ ಶೈಕ್ಷಣಿಕ ಹಿನ್ನೆಲೆಯುಳ್ಳ ಸುಮಾರು 3,000 ಉದ್ಯೋಗಿಗಳ ಅಗತ್ಯವಿದೆ ಎಂದರು.

ಮಾ. 9ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೇಳ ನಡೆಯಲಿದೆ. ಯುವಕ- ಯುವತಿಯರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಕೆಸಿಡಿ ಪ್ರವಾಸೋದ್ಯಮ ವಿಭಾಗ, ಡಾ. ವಿ.ಕೃ. ಗೋಕಾಕ ಗ್ರಂಥಾಲಯ ಆವರಣದಲ್ಲಿ ಸಂದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ವಿದ್ಯಾರ್ಹತೆಗೆ ಅನುಗುಣವಾಗಿ ಸಂದರ್ಶನಕ್ಕೆ ಹಾಜರಾಗಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಂಗವಿಕಲರಿಗೆ ಪ್ರತ್ಯೇಕ ಕೊಠಡಿ ಇರಲಿವೆ. ಮಾಹಿತಿ, ಮಾರ್ಗದರ್ಶನ ನೀಡಲು 20ರಿಂದ 25 ಸಹಾಯವಾಣಿ ತೆರೆಯಲಾಗುತ್ತದೆ. ಕೆಲ ಕೈಗಾರಿಕೆಗಳು, ಗಾರ್ ಮೆಂಟ್ಸ್ಗಳೂ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಅವಕಾಶ ಇರುತ್ತದೆ. ಮೇಳದ ಯಶಸ್ಸಿಗೆ ವಿವಿಧ ಇಲಾಖೆಗಳ ಅಽಕಾರಿಗಳನ್ನು ನಿಯೋಜಿಸಲಾಗಿದೆ. 100 ಸ್ವಯಂಸೇವಕರನ್ನು ನೇಮಿಸಲಾಗುತ್ತದೆ. ಪೇ ಆಧಾರಿತ ಉಪಾಹಾರ, ಊಟದ ಸೌಲಭ್ಯ ಇರಲಿದೆ ಎಂದರು.

ಜಿ.ಪ0. ಸಿಇಒ ಭುವನೇಶ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net