

ಮಂಜುನಾಥ ಎಸ್. ಅಂಗಡಿ ಧಾರವಾಡ ರೈತರು ಮುಂಗಾರು- ಹಿಂಗಾರು ಸಾಂಪ್ರಾಯಿಕ ಬೆಳೆಗಳನ್ನು ಬೆಳೆಯುತ್ತ ಲಾಭಕ್ಕಿಂತ ನಷ್ಟ ಅನುಭವಿಸುವುದು ಸಾಮಾನ್ಯ. ಇರುವಷ್ಟು ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹಾನಿ ತಪ್ಪಿಸಿ ರೈತರಿಗೆ ವರ್ಷವಿಡೀ ಆದಾಯ ತಂದುಕೊಡುವ ಪ್ರಾಯೋಗಿಕ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಉಸ್ತುವಾರಿ ಸಚಿವ ಸಂತೋಷ ಲಾಡ್ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕೃಷಿ ಆಧಾರಿತ ಇಲಾಖೆಗಳಿಗೆ ಸಮಗ್ರ ಕೃಷಿ ಪದ್ಧತಿ ಪ್ರಾಯೋಗಿಕ ಅನುಷ್ಠಾನಕ್ಕೆ ಸೂಚಿಸಿದ್ದರು. ಅದರಂತೆ ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಕೃಷಿ ಆಧಾರಿತ ಹಲವು ಇಲಾಖೆಗಳನ್ನು ಯೋಜನೆಯ ಅನುಷ್ಠಾನಕ್ಕಾಗಿ ತೊಡಗಿಸಿಕೊಳ್ಳಲಾಗಿದೆ. * ಏನಿದು ಸಮಗ್ರ ಕೃಷಿ ಪದ್ಧತಿ...? ಶೇಂಗಾ, ಹೆಸರು, ಸೋಯಾಬಿನ್, ಆಲೂಗಡ್ಡೆ, ಭತ್ತ, ಉದ್ದು, ಗೋವಿನಜೋಳ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು. ಜೋಳ, ಗೋಧಿ, ಕಡಲೆ, ಗೋವಿನಜೋಳ, ಹಿಂಗಾರಿನ ಪ್ರಧಾನ ಬೆಳೆಗಳು. ಸಮರ್ಪಕ ಮಳೆಯಾಗದಿದ್ದರೆ ಅಥವಾ ಅತಿಯಾದ ಮಳೆಯಾದರೆ ರೈತರು ಹಾಕಿದ ಬಂಡವಾಳವೂ ಸಿಗದು. ಹಿಂಗಾರು ಕೈ ಕೊಟ್ಟರಂತೂ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗೆ ಮೇವು ಕೂಡ ಸಿಗಲಾರದ ಪರಿಸ್ಥಿತಿ. ಹೀಗಾಗಿ ಕೃಷಿ, ತೋಟಗಾರಿಕೆಯ ವಿವಿಧ ಬೆಳೆಗಳನ್ನು ಬೆಳೆಯುವುದು, ಹೈನುಗಾರಿಕೆ, ಅವುಗಳ ಅಗತ್ಯ ಪೂರೈಸಿಕೊಳ್ಳಲು ಮೇವು ಉತ್ಪಾದನೆ, ಮೀನು ಸಾಕಣೆ, ಅರಣ್ಯ ಕೃಷಿ, ಕುರಿ- ಕೋಳಿ ಸಾಕಣೆ, ಜೇನು ಸಾಕಣೆ, ವರ್ಷವಿಡೀ ಮನೆ ಬಳಕೆಗೆ ತರಕಾರಿ ಬೆಳೆಯುವುದು ಸೇರಿ ಕೃಷಿ ಚಟುವಟಿಕೆಗಳ ವೈಜ್ಞಾನಿಕ ಏಕೀಕರಣ ವ್ಯವಸ್ಥೆಯೇ ಸಮಗ್ರ ಕೃಷಿ ಪದ್ಧತಿ. * ಜಿಲ್ಲೆಯಾದ್ಯಂತ 100 ರೈತರ ಆಯ್ಕೆ: ಸಮಗ್ರ ಕೃಷಿ ಪದ್ಧತಿ ಪ್ರಸಕ್ತ ಮುಂಗಾರು ಹಂಗಾಮಿನಿAದ ಪ್ರಾಯೋಗಿಕ ಅನುಷ್ಠಾನಗೊಳ್ಳಲಿದೆ. ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ, ಹುಬ್ಬಳ್ಳಿ ತಾಲೂಕುಗಳ ತಲಾ 20 ರೈತರು ಸೇರಿ 100 ರೈತರ ಆಯ್ಕೆ ಮಾಡಲಾಗುತ್ತದೆ. ನೀರಾವರಿ ವ್ಯವಸ್ಥೆ ಇರುವ ರೈತರಿಗೆ ಆದ್ಯತೆ ನೀಡಲಾಗುತ್ತದೆ. ಕೃಷಿ ಅಥವಾ ಇತರ ಇಲಾಖೆಗಳಿಂದ ಕೃಷಿ ಹೊಂಡ ಮಾಡಿಕೊಂಡಿರುವ ರೈತರಿಗೂ ಆದ್ಯತೆ ಇರಲಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ತೋಟಗಾರಿಕೆ ನಿರ್ದೇಶಕನ್ನೊಳಗೊಂಡ ತಾಲೂಕು ಸಮಿತಿ ರೈತರನ್ನು ಆಯ್ಕೆ ಮಾಡಿ ಜಿಲ್ಲಾ ಸಮಿತಿಗೆ ನೀಡಲಿದೆ. ಪ್ರಗತಿಪರ ರೈತರು, * ಹಲವು ಇಲಾಖೆಗಳಿಂದ ಪ್ರಯೋಜನ: ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳಿಂದ ರೈತರು ಪ್ರಯೋಜನ ಪಡೆದುಕೊಳ್ಳಬಹುದು. ಇದಲ್ಲದೆ, ರೈತರು ಸಾಲದ ನೆರವು ಮತ್ತು ಮಾರ್ಗದರ್ಶನ ಪಡೆಯಲು ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಪದಾಽಕಾರಿಗಳೂ ಜಿಲ್ಲಾ ಸಮಿತಿಯಲ್ಲಿದ್ದಾರೆ. ತಾಂತ್ರಿಕ ಸಲಹೆ ನೀಡಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೂಡ ಸಮಿತಿಯ ಭಾಗವಾಗಿದ್ದಾರೆ. ಆಯ್ಕೆಯಾದ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉಪಕಸುಬುಗಳನ್ನು ಮಾಡುತ್ತ ಆದಾಯ ವೃದ್ಧಿಸಿಕೊಳ್ಳಲು ನೆರವಾಗುವ ಜವಾಬ್ದಾರಿಯನ್ನು ಸಂಬAಧಪಟ್ಟ ಇಲಾಖೆ ಅಽಕಾರಿಗಳಿಗೆ ವಹಿಸಲಾಗಿದೆ.
ಉಸ್ತುವಾರಿ ಸಚಿವರ ನಿರ್ದೇಶನದಂತೆ ಪ್ರಸಕ್ತ ಮುಂಗಾರಿನಿ0ದ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಮಳೆಯ ಅನಿಶ್ಚಿತತೆಯಿಂದ ರೈತರು ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸುವುದು ಯೋಜನೆಯ ಉದ್ದೇಶ. ಕೃಷಿ ಆಧಾರಿತ ಉಪಕಸುಬುಗಳನ್ನು ಅಳವಡಿಸಿಕೊಂಡು ವರ್ಷವಿಡೀ ಆದಾಯ ಪಡೆಯಲು ಪ್ರೋತ್ಸಾಹಿಸಲಾಗುತ್ತದೆ - ಮಂಜುನಾಥ ಅಂತರವಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಧಾರವಾಡ