ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪತಂಜಲಿಯಿ೦ದ ಸಿದ್ಧತೆ

7 Dwd 6
Published on

ಧಾರವಾಡ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪತಂಜಲಿ ಯೋಗ ಸಮಿತಿಯಿಂದ ನಗರದ ಮದಿಹಾಳದ ಜೋಶಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಪೂರ್ವಸಿದ್ಧತೆ, ಅಭ್ಯಾಸ ಆರಂಭಗೊAಡಿತು.
ಪತAಜಲಿ ಯೋಗ ಪೀಠದ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು.
ಈ ವೇಳೆ ಭವರಲಾಲ್ ಆರ್ಯ ಮಾತನಾಡಿ, ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನ ನಡೆಯಲಿದೆ. ಯಾವುದೇ ವೃತ್ತಿಯವರಾದರೂ ಪ್ರತಿದಿನ ಬೆಳಗ್ಗೆ ಒಂದು ಗಂಟೆ ಯೋಗ ಮಾಡಬೇಕು. ಇದರಿಂದ ರಾಜ್ಯವನ್ನು ಯೋಗ ಯುಕ್ತ, ರೋಗ ಮುಕ್ತ ಮಾಡಬಹುದು ಎಂದರು.
ಯೋಗಮಯ ಕರ್ನಾಟಕ ಅಭಿಯಾನದ ಅಡಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 100 ಯೋಗ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಪ್ರತಿ ತಾಲೂಕು, ಹೋಬಳಿ, ಗ್ರಾಮ, ವಾರ್ಡ್ಗಳಲ್ಲಿ ಉಚಿತ ಯೋಗ ಶಿಬಿರ, ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ವಿವಿಧ ಯೋಗ ಸಂಸ್ಥೆ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯೋಗವು ಆರೋಗ್ಯವಂತರಿಗೆ ಜೀವನ ಪದ್ಧತಿ, ರೋಗಿಗಳಿಗೆ ಚಿಕಿತ್ಸೆ ಪದ್ಧತಿ, ಸಾಧಕರಿಗೆ ಸಾಧನಾ ಪದ್ಧತಿಯಾಗಿದೆ ಎಂದರು.
ನಮ್ಮ ಯೋಗ ಶಿಕ್ಷಕರು ಉಚಿತ ಯೋಗ ಶಿಬಿರ ನಡೆಸಲು ಸಿದ್ಧರಿದ್ದಾರೆ. ಯೋಗ ಮಾರ್ಗದರ್ಶಕರು, ಶಿಕ್ಷಕರು ಅಗತ್ಯವಿದ್ದರೆ ಪತಂಜಲಿ ಯೋಗ ಸಮಿತಿಯನ್ನು ಸಂಪರ್ಕಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net