ವಿರಾಟ ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಸಿದ್ಧತೆ

26 hnl hindu
Published on

ಹಾನಗಲ್ಲ: ಪಟ್ಟಣದ ತಾರಕೇಶ್ವರ ದೇವಸ್ಥಾನದ ಎದುರಿನಲ್ಲಿ ವಿರಾಟ ಹಿಂದು ಮಹಾಗಣಪತಿ ಪ್ರತಿಷ್ಠಾಪನೆಯ ಪೂರ್ವಭಾವಿ ಸಿದ್ಧತೆಗಾಗಿ ಭಾನುವಾರ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.

ಗಣೇಶೋತ್ಸವದ ಸಿದ್ಧತೆಗೆ ಪುರಸಭೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುತ್ತಣ್ಣ ಹರಿಜನ ಧ್ವಜಾರೋಹಣ ನೆರವೇರಿಸಿದರು. ನಂತರ ಭಾರತ ಮಾತೆ ಹಾಗೂ ಗಣಪತಿ ಪೂಜೆಗಳು ನಡೆದವು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕ ರವಿಚಂದ್ರ ಪುರೋಹಿತ, ಕಳೆದ 2 ದಶಕಗಳಿಂದ ಪ್ರತಿವರ್ಷ 21 ದಿನಗಳ ಕಾಲ ಗಣೇಶೋತ್ಸವ ಆಚರಿಸಲಾಗುತ್ತಿದೆ. ಧರ್ಮಜಾಗೃತಿಗಾಗಿ ಗಣೇಶೋತ್ಸವವನ್ನು ಯುವಕ ಸಂಘಟನೆ ನಡೆಸಿಕೊಂಡು ಬರುತ್ತಿದೆ. 21 ದಿನಗಳ ಕಾಲ ಹೋಮ-ಹವನ, ವಿಶೇಷ ಪೂಜೆ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿಷ್ಠಾಪಿಸಲು ಪರಿಸರ ಸ್ನೇಹಿಯಾದ ಮಣ್ಣಿನ ಬೃಹತ್ ಗಣೇಶ ವಿಗ್ರಹ ಸಿದ್ಧಗೊಳ್ಳುತ್ತಿದೆ. ಪ್ಲಾಸ್ಟಿಕ್ ಮುಕ್ತ ಗಣೇಶೋತ್ಸವ ಆಚರಣೆಗೆ ಕರೆ ನೀಡಲಾಗಿದೆ. ನಮ್ಮ ಹಬ್ಬಗಳನ್ನು ಅರ್ಥಪೂರ್ಣವಾಗಿ, ಸಮಾಜಕ್ಕೆ ಸಂದೇಶ ನೀಡುವ ಮಾದರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕಿರಣ ಮೂಡ್ಲಿಯವರ, ಭೋಜರಾಜ ಕರೂದಿ, ರಾಜಶೇಖರಗೌಡ ಕಟ್ಟೇಗೌಡರ, ಗಣೇಶ ಮೂಡ್ಲಿಯವರ, ಮನೋಜ ಕಲಾಲ, ರವಿರಾಜ ಕಲಾಲ, ಮಹೇಶ ಕಮೊಳ್ಳಿ, ರಾಮು ಯಳ್ಳೂರ, ಚಂದ್ರು ಉಗ್ರಣ್ಣನವರ, ಪ್ರಮೋದ ದೇಶಪಾಂಡೆ, ಪ್ರವೀಣ ಸುಲಾಖೆ, ತುಳಜೇಶ ಮೂಲಿಮನಿ, ಹನುಮಂತ ಹುಡೇದವರ, ಬಸವರಾಜ ಮಟ್ಟಿಮನಿ, ಚಂದ್ರು ಮಲಗುಂದ, ರವಿ ಮೂಡ್ಲಿ, ಗುರುರಾಜ ಏಸಕ್ಕನವರ, ಗುರು ಗೊಲ್ಲರ, ಮಂಜು ಏಸಕ್ಕನವರ, ರಾಮಣ್ಣ ಬಂಕಾಪೂರ, ರವಿ ಪುರದ, ಮೇಘರಾಜ ಕಲಾಲ, ಅಜೇಯ ರೂಗಿಶೆಟ್ಟರ, ಸೂರಜ್ ರೇವಡಿಗಾರ, ಮೋಘ ಕುಲಾಲ, ಮಂಜು ಸುಣಗಾರ, ರಾಜು ಗೌಡ, ರಾಕೇಶ ದೈವಜ್ಞ, ಪರಶುರಾಮ ನಿಂಗೋಜಿ, ಪವನ ಸುಣಗಾರ, ಶಿವು ಕಂಕಾಳೆ, ರಾಜೇಶ ಬ್ಯಾಡಗಿ, ಬಸವರಾಜ ಚನ್ನಗೌಡ್ರ, ನಾಗರಾಜ ಎರಿಮನಿ, ಬಸವರಾಜ ಗುಡಿ, ಶ್ರೀನಿವಾಸ ಬಂಕನಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net