ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ

SIDDARUDH SWAMIJI
Published on

ಬೈಲಹೊಂಗಲ: ಪಟ್ಟಣದ ಶ್ರೀನಗರದಲ್ಲಿ ಡಿ.27 ಮತ್ತು 28ರಂದು ಗುರು ಸಿದ್ಧಾರೂಢರ ಮಠದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರೆ ಏರ್ಪಡಿಸಲಾಗಿದೆ. 27ರಂದು ಬೆಳಗ್ಗೆ 8ಕ್ಕೆ ಗುರು ಸಿದ್ಧಾರೂಢರ ಮೂರ್ತಿ ಭವ್ಯ ಮೆರವಣಿಗೆ, ಪೂರ್ಣಕುಂಭಮೇಳ, ಮಹಾಪ್ರಸಾದ, ಸಂಜೆ 6ಕ್ಕೆ ಪ್ರವಚನ ಹಾಗೂ ಮಠದ ಉದ್ಘಾಟನೆ ನೆರವೇರಲಿದೆ.

ಇಂಚಲ ಡಾ.ಶಿವಾನಂದ ಭಾರತೀ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸೀ ಆರಾದ್ರಿಮಠ ಸಾನ್ನಿಧ್ಯವಹಿಸುವರು.

ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಆಗಮಿಸಲಿದ್ದಾರೆ. 28ರಂದು ಬೆಳಗ್ಗೆ 6ಕ್ಕೆ ಹೋಮ-ಹವನ, ರುದ್ರಾಭಿಷೇಕ, ಮಂಗಳಾರತಿ, ಮಹಾಪ್ರಸಾದ, ಸಂಜೆ 6ಕ್ಕೆ ಪ್ರವಚನ ಸಮಾರೋಪ, ದೇಣಿಗೆ ನೀಡಿದ ಮಹನೀಯರಿಗೆ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net