14 ಕೇಂದ್ರಗಳಲ್ಲಿ ಗೆಜೆಟೆಡ್​ ಪ್ರೊಬೆಷನರ್​ ಪರೀಕ್ಷೆಗೆ ಸಿದ್ಧತೆ

DC
Published on

ಕೋಲಾರ: ನಗರದ 14 ಕೇಂದ್ರಗಳಲ್ಲಿ ಡಿ.29ರಂದು ನಿಗದಿಯಾಗಿರುವ 2023&-24ನೇ ಸಾಲಿನ ಗೆಜೆಟೆಡ್​ ಪ್ರೊಬೆಷನರ್​ ಗ್ರೂಪ್​ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ನಡೆಸಿ ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾ ಪರೀಕ್ಷಾ ಮುಖ್ಯ ಮೇಲ್ವಿಚಾರಕರೂ ಆದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಪರೀಕ್ಷೆಗೆ ಒಟ್ಟು 5,718 ಮಂದಿ ನೋಂದಾಯಿಸಿದ್ದು, ಎಲ್ಲ 14 ಕೇಂದ್ರಗಳು ನಗರದಲ್ಲೇ ಇವೆ ಎಂದು ತಿಳಿಸಿದರು.

ಬೆಳಗಿನ ಅವಧಿಯ ಪರೀಕ್ಷೆ ಬೆಳಗ್ಗೆ 10 ರಿಂದ 12 ಗಂಟೆ, ಮಧ್ಯಾಹ್ನದ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೂ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಶ್ನೆಪತ್ರಿಕೆಗಳನ್ನು ಖಜಾನೆಯಲ್ಲಿ ಸಂರಕ್ಷಣೆ, ವಿತರಣೆ ಕುರಿತಂತೆ ನಿಗಾವಹಿಸಲು ಎಡಿಸಿ ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪರೀಕ್ಷಾ ನೋಡಲ್​ ಅಧಿಕಾರಿಯಾಗಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿಕೇಂದ್ರಕ್ಕೂ ಓರ್ವ ಮೇಲ್ಚಿಚಾರಕರಿದ್ದು, ತಲಾ ಒಬ್ಬರಂತೆ ಸ್ಥಳಿಯ ನಿರೀಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ 4 ಕೇಂದ್ರಗಳಿಗೆ ಒಬ್ಬರು ವೀಕ್ಷಕರು, ತಲಾ 3 ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿ ನೇಮಿಸಲಾಗಿದೆ ಪ್ರಶ್ನೆಪತ್ರಿಕೆ ಸಾಗಣೆ ಸಂದರ್ಭದಲ್ಲಿ ಪ್ರತಿ ಮಾರ್ಗಾಧಿಕಾರಿ ಜತೆ ಐವರು ಪೊಲೀಸರ ಬೆಂಗಾವಲು ಒದಗಿಸಲಾಗಿದೆ ಎಂದು ತಿಳಿಸಿದರು.

ಆಯಾ ಪರೀಾ ಕೇಂದ್ರಗಳ ಸುತ್ತಮುತ್ತ ಸೂಕ್ತ ಬಂದೋಬಸ್ತ್​ ಕಲ್ಪಿಸಲಾಗಿದ್ದು, ಪರೀಾ ಪ್ರಾಧಿಕಾರ ನಿರ್ದೇಶನದಂತೆ ಅಭ್ಯರ್ಥಿಗಳು ಪರೀಕ್ಷೆಗೆ ಆಗಮಿಸಬೇಕು. ನಿಯಮ ಮೀರಿದಲ್ಲಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುವುದು ಎಂದು ತಿಳಿಸಿರು.

ಮಾರ್ಗಾಧಿಕಾರಿಗಳಾಗಿ ಬಿಇಒಗಳಾದ ಉಮಾ, ಚಂದ್ರಕಲಾ, ಮುನಿಲಕ್ಷ$್ಮಯ್ಯ, ಗಂಗರಾಮಯ್ಯ, ಶಿಕ್ಷಣಾಧಿಕಾರಿ ವೀಣಾ ಅವರನ್ನು ನೇಮಿಸಲಾಗಿದೆ.

ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಚೈತ್ರಾ, ತಹಸೀಲ್ದಾರ್​ ನಯನಾ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ ನಗರದ ಮದರ್​ತೆರೇಸಾ, ಸುಭಾಷ್​ ಶಾಲೆ ಮತ್ತಿತರ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಕ್ರಮವಹಿಸಲು ಸೂಚಿಸಿದರು.

ಕೇಂದ್ರಗಳ ಮೇಲ್ವಿಚಾರಕರಾಗಿ ಗಾಯತ್ರಿ, ಶಶಿವಧನ, ರಾಧಮ್ಮ, ನಾಗರಾಜ್​ ಸೇರಿ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಪ್ರಾಂಶುಪಾಲರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

14 ಕೇಂದ್ರಗಳು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಪಿಯು ಕಾಲೇಜು, ನೂತನ ಪಿಯು ಕಾಲೇಜು, ಸರ್ಕಾರಿ ಬಾಲಕರ ಪಿಯು ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು, ಮಹಿಳಾ ಸಮಾಜ ಪಿಯು ಕಾಲೇಜು, ಸುಭಾಷ್​ ಪ್ರೌಢಶಾಲೆ, ಎಸ್​ಡಿಸಿ ಕಾಲೇಜು, ಎಸ್​ಡಿಸಿ ಇಂಡಿಪೆಂಡೆಂಟ್​ ಪಿಯು ಕಾಲೇಜು, ಚಿನ್ಮಯ ವಿದ್ಯಾಲಯ, ಗೋಕುಲ ಕಾಲೇಜು, ಮಹಿಳಾ ಸಮಾಜ ಪ್ರೌಢಶಾಲೆ, ಮದರ್​ಥೆರೆಸಾ ಇಂಗ್ಲೀಷ್​ ಶಾಲೆ, ಅಲ್​ಅಮೀನ್​ ಡಾ.ಮುಮ್ತಾಜ್​ ಅಹ್ಮದ್​ಖಾನ್​ ಪದವಿಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net