

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಮನೆಯನ್ನು ಕಟ್ಟಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯನ್ನುz್ದೆÃಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಆಶಯದಂತೆ ಕಾಂಗ್ರೆಸ್ ಕಟ್ಟಡಗಳ ಸಮಿತಿಯ ಅಧ್ಯಕ್ಷರು ಹಾಗೂ ಸಚಿವರಾದ ಕೆ.ಜೆ.ಜಾರ್ಜ್ ಅವರು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅತ್ಯಂತ ಉತ್ಸುಕರಾಗಿದ್ದಾರೆ. ಜಿಲ್ಲೆಯ ಐವರು ಶಾಸಕರುಗಳು ಕೂಡ ಇವರ ಆಶಯದ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ ಎಂದರು.
ಕಟ್ಟಡ ಕಟ್ಟುವುದರ ಜೊತೆಗೆ ಪಕ್ಷವನ್ನು ಇನ್ನು ಹೆಚ್ಚು ಸಂಘಟನಾತ್ಮಕವಾಗಿ ಕಟ್ಟಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಸಮಿತಿಗಳನ್ನು ಪುನರ್ ರಚಿಸಿ ಅವುಗಳು ಕಾರ್ಯ ಪ್ರವೃತ್ತವಾಗುವಂತೆ ನೋಡಿಕೊಳ್ಳಬೇಕು. ಬಿಎಲ್‌ಎ-೨ ನೇಮಕ ಕೂಡ ಅಗತ್ಯವಿದೆ ಎಂದು ಸಭೆಗೆ ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಪಕ್ಷ ಕಟ್ಟುವುದರ ಜೊತೆಗೆ ಪಕ್ಷದ ಮನೆ ಕಟ್ಟುವುದು ಕೂಡ ಅಗತ್ಯವಾಗಿದೆ. ನನ್ನ ಸುದೈವ ಜಿಲ್ಲಾ ಕೇಂದ್ರದಲ್ಲಿ ವಿಶಾಲವಾದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿz್ದÉÃವೆ ಎಂದರು.
ಇಂತಹ ಕಟ್ಟಡ ಕಟ್ಟುವಾಗ ಸಹಕಾರಕ್ಕಾಗಿ ಮೂರು ವರ್ಗದ ಜನರನ್ನು ಕಾಣಬಹುದು. ಹಣವುಳ್ಳವರು, ಪಕ್ಷದ ಬಗ್ಗೆ ಗೌರವವಿರುವವರು, ದಾನ ನೀಡಿ ಗೌಪ್ಯವಾಗಿರುತ್ತಾರೆ. ಮತ್ತೊಂದು ವರ್ಗ ತಮ್ಮ ಅಲ್ಪ ಕಾಣಿಕೆಯೊಂದಿಗೆ ಸಂಗ್ರಹಕ್ಕೆ ಮುಂದಾಗುತ್ತಾರೆ. ಮತ್ತೊಂದು ವರ್ಗ ದೈಹಿಕವಾಗಿ ಸಹಕಾರ ನೀಡುತ್ತಾರೆ. ಈ ಮೂರು ವರ್ಗದ ಜನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ತಮ್ಮ ತಮ್ಮ ಶಕ್ತನುಸಾರ ಸಹಾಯ ಒದಗಿಸಲಿದ್ದು, ಸುಂದರ ಭವನ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕಟ್ಟಡ ಉಪ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಭವನ ನಿರ್ಮಾಣ ಸಮಿತಿ ರೂಪುಗೊಂಡಿದೆ. ಕಟ್ಟಡ ಉಪ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿ, ಕೆ.ಎಸ್.ಶಾಂತೇಗೌಡ ಅವರನ್ನು ಖಜಾಂಚಿಯನ್ನಾಗಿ ಮಾಡಲಾಗಿದೆ. ಸಮಿತಿಯ ಸಲಹೆಯಂತೆ ಕಾರ್ಯ ಪ್ರವೃತ್ತವಾಗಿz್ದÉÃವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮAತ್ ಮಾತನಾಡಿ, ಈಗಾಗಲೇ ತರೀಕೆರೆ ಹಾಗೂ ಕಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಭವನ ನಿರ್ಮಾಣಕ್ಕೆ ವಂತಿಕೆ ಸಂಗ್ರಹ ಕಾರ್ಯ ಸಕರಾತ್ಮಕವಾಗಿ ಮುಂದುವರೆದಿದೆ. ಇಂದು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗಳು ಮುಂದುವರೆಯಲಿವೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಪ್ರಮುಖರಾದ ಮುನೀರ್ ಅಹಮದ್, ತನೋಜ್ ನಾಯ್ಡು ಉಪಸ್ಥಿತರಿದ್ದರು.