ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆ, ಕನ್ನಡ ಜ್ಯೋತಿ ರಥ ಯಾತ್ರೆ

99
Published on

ಚಿಕ್ಕಬಳ್ಳಾಪುರ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಯು ಜಿಲ್ಲಾದ್ಯಂತ ಸಂಚರಿಸಲಿದೆ.

ಜಿಲ್ಲೆಯಲ್ಲಿ ಎರಡು ದಿನ ನಡೆಯುವ (ನ.19 ರಿಂದ ನ.20) ರಥಯಾತ್ರೆಯು ಅರ್ಥಪೂರ್ಣ, ಸಾಂಸತಿಕ ಮತ್ತು ವೈಭವಯುತವಾಗಿರಬೇಕು. ಇದರಲ್ಲಿ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಜನರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

*ರಥಯಾತ್ರೆ ಸಂಚಾರ

ನ.19 ರಂದು ಬೆಳಿಗ್ಗೆ 10 ಕ್ಕೆ ಗೌರಿಬಿದನೂರು ತಾಲೂಕಿನ ಎಚ್.ಎನ್.ರಾಷ್ಟ್ರೀಯ ವಿಜ್ಞಾನ ಪಾರ್ಕ್ ಬಳಿ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಮಧ್ಯಾಹ್ನ 12 ಕ್ಕೆ ಮಂಚೇನಹಳ್ಳಿ, 1.30 ಕ್ಕೆ ಗುಡಿಬಂಡೆ, 3.30 ಕ್ಕೆ ಬಾಗೇಪಲ್ಲಿ ಮತ್ತು ಸಂಜೆ 5 ಕ್ಕೆ ಪೆರೇಸಂದ್ರಕ್ಕೆ ಆಗಮಿಸಲಿದೆ. ನ.10 ರಂದು ಬೆಳಿಗ್ಗೆ 9.30 ಕ್ಕೆ ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಸಂಚಾರ ಯಾತ್ರೆ ಪ್ರಾರಂಭ, ಶಿಡ್ಲಘಟ್ಟಕ್ಕೆ ಬೆಳಿಗ್ಗೆ 11.30 ಕ್ಕೆ, ಚೇಳೂರಿಗೆ ಮಧ್ಯಾಹ್ನ 1.30 ಕ್ಕೆ, ಚಿಂತಾಮಣಿಗೆ ಮಧ್ಯಾಹ್ನ 3 ಕ್ಕೆ ಆಗಮಿಸಲಿದ್ದು ಬಳಿಕ ಕೋಲಾರ ಜಿಲ್ಲೆಗೆ ಬೀಳ್ಕೊಡುಗೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net