

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಿ ಕ್ರಿಯೇಷನ್ ನಿರ್ಮಾಣದ ದೂರ ತೀರ ಯಾನ ಸಿನಿಮಾದ ಬಿಡುಗಡೆ ಪೂರ್ವ ಪ್ರೀಮಿಯರ್ ಶೋ ನಗರದ ಪದ್ಮಾ ಚಿತ್ರಮಂದಿರದಲ್ಲಿ ಬುಧವಾರ ನಡೆಯಿತು.
ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಪ್ರೀಮಿಯರ್ ಶೋಗೆ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಚಾಲನೆ ನೀಡಿ, ಸಿನಿಮಾ ವೀಕ್ಷಿಸಿದರು.
ಸಿನಿಮಾದ ನಿರ್ದೇಶಕ ಮಂಸೋರೆ, ನಿರ್ಮಾಪಕ ದೇವರಾಜ್ ಆರ್., ನಾಯಕ ವಿಜಯಕೃಷ್ಣ, ನಾಯಕಿ ಪ್ರಿಯಾ0ಕ ಕುಮಾರ, ನಟರಾದ ಪಿ.ಡಿ. ಸತೀಶ್ಚಂದ್ರ, ಕೃಷ್ಣ ಹೆಬ್ಬಾಳ ಸೇರಿ ತಾರಾ ಬಳಗ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು.
ಸಿನಿಮಾ ಪ್ರದರ್ಶನದ ಬಳಿಕ ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಹ.ವೆಂ. ಕಾಖಂಡಕಿ, ಡಾ. ರಾಜಕುಮಾರ ಅಭಿಮಾನಿಗಳ ಒಕ್ಕೂಟದ ಮುಖಂಡ ಶಿವಾನಂದ ಮುತ್ತಣ್ಣವರ, ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ, ಇತರರು ಅಭಿಪ್ರಾಯ ಹಂಚಿಕೊ0ಡರು.
ಈ ವೇಳೆ ನಿರ್ದೇಶಕ ಮಂಸೋರೆ ಮಾತನಾಡಿ, ಬೆಂಗಳೂರಿನಿ0ದ ಹೊರಗೆ ಇದೇ ಮೊದಲ ಬಾರಿ ಪ್ರೀಮಿಯರ್ ಶೋ ಆಯೋಜಿಸಿದ್ದೇವೆ. ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.