ಪೂರ್ವಭಾವಿ ಸಭೆ ನಾಳೆ

sabhe
Published on

ಹುಬ್ಬಳ್ಳಿ: ಕುರುಬರಿಗೆ ಎಸ್‌ಟಿ ಮೀಸಲಾತಿ ಪ್ರಕಟಿಸಲು ಒತ್ತಾಯಿಸಿ ಬೆಳಗಾವಿಯಲ್ಲಿ ಅ. 2 ಮತ್ತು 3ರಂದು ಕುರುಬ ಸಮದಾಯದ ರಾಷ್ಟ್ರೀಯ ಬೃಹತ್ ಸಮಾವೇಶ (ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್) ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಸೆ. 5ರಂದು ಬೆಳಗ್ಗೆ 11ಕ್ಕೆ ಪೂರ್ವಭಾವಿ ಸಭೆ ಏರ್ಪಾಟಾಗಿದೆ.
ಸಮಾವೇಶದ ರೂವಾರಿ ಎಚ್. ವಿಶ್ವನಾಥ, ಮಾಜಿ ಮಂತ್ರಿ ಎಚ್.ಎಂ. ರೇವಣ್ಣ, ಧಾರವಾಡ ಜಿಲ್ಲೆ ಪ್ರದೇಶ ಕುರುಬರ ಸಂಘದ ಅಧ್ಯಕ್ಷೆ ಯಲ್ಲಮ್ಮ ನಾಯ್ಕರ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಕೆ.ಎನ್. ಗಡ್ಡಿ, ಕುಸುಮಾವತಿ ಶಿವಳ್ಳಿ, ಬಸವರಾಜ ಗುರಿಕಾರ, ವಿವಿಧ ತಾಲೂಕುಗಳ ಮುಖಂಡರು ಪಾಲ್ಗೊಳ್ಳುವರು ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂತ ಮುತ್ತಣ್ಣವರ, ಪೀರಾಜ ಖಂಡೇಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net