

ರಾಯಚೂರು ನಗರದ ಶಿವಯೋಗಿ ಸಿದ್ದರಾಮೇಶ್ವರ ಕಲ್ಯಾಣದಲ್ಲಿ ಮೇ 18 ರಂದು ಕರ್ನಾಟಕ ರಾಜ್ಯ ಬೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷರ ನೇಮಕ ಮಾಡಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಸಮಾಜದ ಮುಖಂಡರು ಹಿರಿಯರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಕಾಶಿನಾಥ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾತನಾಡಿ, ಕರ್ನಾಟಕ ರಾಜ್ಯ ಬೋವಿ ವಡ್ಡರ ಸಂಘದ ಜಿಲ್ಲಾ ಘಟಕವು 2 ವರ್ಷಗಳ ಹಿಂದೆ ಅಧ್ಯಕ್ಷ ರಾಜಿನಾಮೆ ನೀಡಿದ್ದು, ಇದುವರೆಗೂ ಅಧ್ಯಕ್ಷರ ಆಯ್ಕೆ ಮಾಡಿಲ್ಲ, ಈ ಹಿಂದೆ ರಾಜೀನಾಮೆ ನೀಡಿದ ಅಧ್ಯಕ್ಷರು ಸಹ ಈ ಬಗ್ಗೆ ಎಚ್ಚೆತ್ತುಕೊಂಡು ಸಂಘಕ್ಕೆ ಬೇರೆಯರ ನೇಮಕ ಮಾಡಲು ಮುಂದೆ ಬರುತ್ತಿಲ್ಲ, ಈ ಕುರಿತು ಅಧ್ಯಕ್ಷ ಆಯ್ಕೆ ಮಾಡಲು ಈ ಸಭೆ ಕರೆದರೂ ಸಹ ಅಧ್ಯಕ್ಷರು ಸ್ಪಂದಿಸಿಲ್ಲ,
ಜೊತೆಗೆ ತಾಲೂಕವಾರು ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿಲ್ಲ, ಯಾವುದೇ ಸಭೆಗಳಿಗೆ ಭಾರದೇ ಇರುವುದರಿಂದ ಸಂಘದ ಮುಖಂಡರುಗಳು ನಿರ್ಣಯಿಸಿ ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಆದರಿಂದ ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರು ಸದಸ್ಯರು, ಹಿರಿಯ ಮುಖಂಡರು ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಧ್ಯಕ್ಷ ಆಯ್ಕೆಗೆ ಭಾಗವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ.ತಿಮ್ಮಪ್ಪ, ಸತ್ಯಪ್ಪ, ನಾರಾಯಣ, ವೀರೇಶ, ಯಲ್ಲಪ್ಪ, ಉರುಕುಂದ, ನಾಗಪ್ಪ, ಭೀಮಣ್ಣ, ವೆಂಕಟೇಶ, ನಾಗರಾಜ ಇದ್ದರು.