ಪೂರ್ವಭಾವಿ ಸಭೆ 8ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಒಳಮೀಸಲಾತಿಗಾಗಿ ಚಿತ್ರದುರ್ಗದಲ್ಲಿ ಡಿ. 14ರಂದು ಏರ್ಪಡಿಸಿರುವ ಮಾದಿಗ ವಕೀಲರ ಸಮ್ಮೇಳನ ನಿಮಿತ್ತ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ವತಿಯಿಂದ ಡಿ. 8ರಂದು ಬೆಳಗ್ಗೆ 11.30ಕ್ಕೆ ನಗರದ ನಿವೃತ್ತ ನೌಕರ ಸಭಾಭವನದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.

ಅತಿಥಿಗಳಾಗಿ ನ್ಯಾಯವಾದಿಗಳಾದ ಎಸ್​. ಅರುಣಕುಮಾರ, ಸುರೇಂದ್ರಕುಮಾರ, ಎಂ. ಶಿವಕುಮಾರ, ಡಾ. ನರಹರಿ, ಮಂಜಪ್ಪ ಹಲಗೇರಿ, ಬಿಸನಳ್ಳಿ ಜಯಪ್ಪ, ಇತರರು ಆಗಮಿಸಲಿದ್ದಾರೆ. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net