

ವಿಜಯಪುರ: ನಗರದ ಕಾಳಿಕಾ ದೇವಸ್ಥಾನದಲ್ಲಿ ಗುರುವಾರ ಗಜಾನನ ಉತ್ಸವದ ಪೂರ್ವಭಾವಿ ಸಭೆ ನಡೆಯಿತು.
ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಮಾತನಾಡಿ, ಗಜಾನನ ಉತ್ಸವ ಮಂಡಳಿಯಿಂದ ಹಲವು ವರ್ಷಗಳಿಂದ ಗಜಾನನ ಮೂರ್ತಿ ಪ್ರತಿಷ್ಟಾಪಿಸಲಾಗುತ್ತಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ಜನ ಉತ್ಸವ ನೋಡಲು ಆಗಮಿಸುತ್ತಾರೆ. ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹಿಂದು ಸಂಪ್ರದಾಯದಂತೆ ಉತ್ಸವವನ್ನು ಅಚ್ಚಕಟ್ಟಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಗಜಾನನ ಉತ್ಸವ ಮಹಾ ಮಂಡಲದಿಂದ ಪ್ರತಿ ಸೋಮವಾರ ಛತ್ರಪತಿ ಶಿವಾಜಿ ವೃತ್ತದಲ್ಲಿ ಅನ್ನದಾಸೋಹ ಏರ್ಪಡಿಸುತ್ತಾ ಬಂದಿದ್ದು, ಈಗ 96ನೇ ಸೋಮವಾರ ಯಶಸ್ವಿಯಾಗಿ ಮುಂದುವರಿದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಮುಖಂಡರಾದ ಭೀಮಾಶಂಕರ ಹದನೂರ, ಗೋಪಾಲ ಘಟಕಾಂಬಳೆ, ರವಿಕಾಂತ ಬಗಲಿ, ರಾಜು ಕರ್ಬಡ್ನಾಳ, ಶಿವಾನಂದ ಮಾನಕರ ಮತ್ತಿತರರಿದ್ದರು. ಮತ್ತು ಮಂಡಳಿಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದರು.
ಗಜಾನನ ಉತ್ಸವ ಮಹಮಂಡಲದ ಈ ವರ್ಷದ ಅಧ್ಯಕ್ಷರಾಗಿ ರಾಜು ಹೊನ್ನೂರ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅರವಿಂದ ಮರೆಗುದ್ದಿ, ರಾಮಚಂದ್ರ ಚವ್ಹಾಣ್, ಗಣೇಶ ರಣದೇವಿ, ನಿಖಿಲ್ ಮ್ಯಾಗೇರಿ, ರಾಕೇಶ ನಾಗರಾಳ, ಶಿವು ಶಿರನಾಳ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮಾಯಾಚಾರಿ, ಕಿರಣ ಗೊಲಗೇರಿ, ಕಾರ್ಯದರ್ಶಿಯಾಗಿ ವಿನಾಯಕ ಜುಮ್ಮನಾಳ, ಮಂಜು ಕಡಪಟ್ಟಿ, ಶಿವರಾಜ್ ಮಡಿವಾಳ, ನಂದು ರೂಡಗಿ, ಹಾಜು ಭಜಂತ್ರಿ, ಮಂತನ್ ಗಾಯಕ್ವಾಡ್, ಸಹಕಾರ್ಯದರ್ಶಿಯಾಗಿ ಸುನಿಲ್ ಮುನೂರ್, ರಾಹುಲ್ ಸೂರ್ಯವಂಶಿ, ಸಂದೀಪ ಬಾಗೇವಾಡಿ, ಕೋಶಾಧ್ಯಕ್ಷರಾಗಿ ವಿವೇಕ ತಾವರಗೇರಿ ಅವರನ್ನು ಆಯ್ಕೆ ಮಾಡಲಾಯಿತು.