

ಕವಿತಾಳ: ಸಮೀಪದ ಸುಕ್ಷೇತ್ರ ಉಟಕನೂರು ಮರಿಬಸವಲಿಂಗ ದೇಶೀಕೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ಶಿಲಾ ಮಂಟಪ ಉದ್ಘಾಟನೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲು ಜ.12ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.
ಅಡವಿಸಿದ್ಧೇಶ್ವರ ಶಿಲಾ ಮಂಟಪ ಉದ್ಘಾಟನೆ, ನೂತನ ಗೋಪೂರಕ್ಕೆ ಕಲಶಾರೋಹಣ, ಬಸವ ಮಹಾ ಪುರಾಣ ಪಟ್ಟಾಧಿಕಾರ ಮತ್ತು ಐದು ದಿನಗಳ ವಿಶೇಷ ಕಾರ್ಯಕ್ರಮದ ಕುರಿತು ಪ್ರಮುಖ ಶ್ರೀಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವದು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಮಠದ ಪಿಠಾಧಿಪತಿ ಮರಿ ಬಸವರಾಜ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.