

ಹನೂರು: ಸಾಲೂರು ಬೃಹನ್ಮಠದ ಲಿಂಗೈಕ್ಯ ಪಟ್ಟದ ಶ್ರೀಗುರುಸ್ವಾಮೀಜಿ ಅವರ ಪುಣ್ಯ ಸಂಸ್ಮರಣೋತ್ಸದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಸಂಬಂಧ ಜೂ.19ರಂದು ಬೆಳಗ್ಗೆ 10 ಗಂಟೆಗೆ ಮಠದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.
ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮೈಸೂರಿನ ಕುಂದೂರು ಮಠದ ಶ್ರೀ ಡಾ. ಶರತ್‌ಚಂದ್ರ ಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳ ನೇತೃತ್ವವಲ್ಲಿ ಜೂ.19 ರಂದು ಲಿಂಗೈಕ್ಯ ಗುರುಸ್ವಾಮೀಜಿ ಅವರ ಪ್ರಥಮ ಮಾಸದ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀಗಳ ಪುಣ್ಯ ಸಂಸ್ಮರಣೋತ್ಸವದ ಪೂರ್ವಭಾವಿ ಸಭೆಯನ್ನೂ ಆಯೋಜಿಸಲಾಗಿದೆ. ಆದ್ದರಿಂದ ಮಠದ ಹಳೆಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ವೀರಶೈವ-ಲಿಂಗಾಯತ, ಬೇಡಗಂಪಣ ಸಮುದಾಯದ ಜನತೆ, ದೇವರಗುಡ್ಡರು, ಶ್ರೀ ಮಠದ ಸದ್ಬಕ್ತರು ಹಾಗೂ ಎಲ್ಲ ಸಮುದಾಯದ ಮುಖಂಡರು ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅರ್ಥಪೂರ್ಣ ಸಂಸ್ಮರಣೋತ್ಸವಕ್ಕೆ ಅಗತ್ಯ ಸಲಹೆ ಹಾಗೂ ಸಹಕಾರ ನೀಡುವಂತೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.