

ಬೆಳ್ತಂಗಡಿ: ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಜೂನ್ 14ರಂದು ನಡೆಯಲಿರುವ ಪುಸ್ತಕ ವಿತರಣೆ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲರಿಗೆ ಪೌರ ಸನ್ಮಾನ ಪೂರ್ವಭಾವಿ ಸಭೆ ಭಾನುವಾರ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ನಡೆಯಿತು.
ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದ್ದರು. ಪೌರ ಸನ್ಮಾನ ಸಮಿತಿ ಅಧ್ಯಕ್ಷ ಎಂ.ಗಂಗಾಧರ ಮಿತ್ತಮಾರು, ಶಿವಪ್ರಸಾದ್ ಅಜಿಲ, ಹಿರಿಯರಾದ ಸೋಮನಾಥ ಮಯ್ಯ, ಭರತೇಶ್ ವಿ., ಡಾ.ಎನ್.ಎಂ.ತುಳುಪುಳೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ರಾಜಶೇಖರ ಶೆಟ್ಟಿ, ವಕೀಲ ಅಜಿತ್ ಕುಮಾರ್ ನಾವರ, ಸದಾನಂದ ಪೂಜಾರಿ ಉಂಗಿಲಬೈಲ್, ಸುಪ್ರೀತ್ ಜೈನ್, ರತ್ನರಾಜ ಜೈನ್ ಪಿಲ್ಯ, ಮೋಹನ್ ಎ.ದಾಸ್ ಅಳದಂಗಡಿ, ಗ್ರಾಪಂ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಸಂತೋಷ್ ಹೆಗ್ಡೆ ಕಟ್ಟೆ, ಶಿಕ್ಷಕ ನಾಗಭೂಷಣ್, ಶಿಕ್ಷಕಿ ಮಂಗಳಾ, ಬಡಗಕಾರಂದೂರು ಶಾಲೆ ಮುಖ್ಯ ಶಿಕ್ಷಕ ಸುರೇಶ್, ಹರಿಣಾಕ್ಷಿ ಕೆ.ಶೆಟ್ಟಿ, ಶ್ರೀರಂಗಮಯ್ಯ, ಜಗನ್ನಾಥ ಶೆಟ್ಟಿ, ಗಣೇಶ್ ದೇವಾಡಿಗ, ಧರ್ಣಪ್ಪ ದೋರಿಂಜೆ, ಯಶೋಧರ ಬಿಕ್ಕಿರ, ಸದಾನಂದ ಬಿ.ಕುದ್ಯಾಡಿ, ಕೊರಗಪ್ಪ ಕುಡ್ದಲಬೆಟ್ಟು, ಜಗದೀಶ್ ರೈ, ಹರೀಶ್ ಕುಲಾಲ್ ಕೆದ್ದು, ಸಂತೋಷ್ ಕಟ್ಟೆ ಮತ್ತಿತರರಿದ್ದರು.
ಪೌರ ಸನ್ಮಾನ ಸಮಿತಿ ಕಾರ್ಯದರ್ಶಿ ಪಿ.ಎಚ್.ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ವಂದಿಸಿದರು.