ಸಿರಿಧಾನ್ಯ ಖಾದ್ಯ ಸ್ಪರ್ಧೆ 7ಕ್ಕೆ

MKG1
Published on

ನ್ಯಾಮತಿ: ತಾಲೂಕಿನ ರಾಮೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೆ.7ರ ಮಧ್ಯಾನ್ಹ 12 ಗಂಟೆಗೆ ಅಂತರಾಷ್ಟ್ರಿಯ ಸಿರಿಧಾನ್ಯ ವರ್ಷಾಚರಣೆ ಅಂಗವಾಗಿ ಸಿರಿಧಾನ್ಯ ಖಾದ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಯರಗನಾಳು ಗ್ರಾಪಂ ಮತ್ತು ದಾವಣಗೆರೆ ಐಸಿಏಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ರಾಮೇಶ್ವರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.

ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಬೇಕು ಹಾಗೂ ಖಾದ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ದಾವಣಗೆರೆ ಕೃಷಿ ವಿಸ್ತರಣಾ ತಜ್ಞ ರಘುರಾಜ್ ಜೆ., ಗ್ರಾಪಂ ಅಧ್ಯಕ್ಷರಾದ ಸವಿತಾ, ಮುಖಂಡರಾದ ನಾಗರಾಜ್, ಪ್ರಕಾಶ್, ಶಿಲ್ಪಾ, ರಾಜೇಶ್ವರಿ, ಗೀತಾ, ಅನಿತಾ, ಸಾಕಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net