ರ‍್ಯಾಂಪ್ ಮೇಲೆ ನಾಜೂಕಾಗಿ ಹೆಜ್ಜೆ ಹಾಕಿದ ಗರ್ಭಿಣಿಯರು; ಇದು ಮಹಿಳೆಯರ ದಿನಾಚರಣೆ ಸ್ಪೆಷಲ್​

pregnant
Published on

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ ಪೋರ್ಟ್ ರಸ್ತೆ ಹೆಬ್ಬಾಳ ಬಳಿಯ ರೈನ್ ಬೋ ಮಕ್ಕಳ ಆಸ್ಪತ್ರೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅಮ್ಮಂದಿರು ತಮ್ಮ ಮುದ್ದು ಮಕ್ಕಳ ಜೊತೆಗೆ ಹಾಗೂ ಗರ್ಭಿಣಿಯರು ಗಂಡಂದಿರ ಜತೆಗೆ ರ‍್ಯಾಂಪ್ ವಾಕ್ ಮಾಡುವ ಮೂಲಕ ವಿಶೇಷ ಮೆರಗು ಮೂಡಿಸಿದರು.

ಮಾಡಲ್‌ಗಳಿಗೇನು ಕಮ್ಮಿ ಇಲ್ಲ ಎಂಬಂತೆ ಖುಷಿ ಖುಷಿಯಿಂದ ಹೆಜ್ಜೆ ಹಾಕಿದ ಗರ್ಭಿಣಿಯರು ಗಮನ ಸೆಳೆದರು.

ಪಾಲಕರು ಜತೆಯಲ್ಲಿ ಇಲ್ಲದಿರುವಾಗ ಈ ವೇಳೆಯನ್ನ ಕಳೆಯುವುದು ಕೊಂಚ ಕಷ್ಟವೆನಿಸುತ್ತಿತ್ತು. ಆದರೆ ರೈನ್ ಬೋ ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ನಿರಂತರವಾಗಿ ತೋರಿಸುತ್ತಿರುವ ಕಾಳಜಿ, ಪ್ರೀತಿಯ ಮುಂದೆ ಅದೆಲ್ಲವು ಮರೆತು ಹೋಗುತ್ತಿದೆ. ಇದು ಯಾವತ್ತೂ ಮರೆಯದ ಕ್ಷಣ ನನಗೆ ಎಂದು ಪಾಲ್ಗೊಂಡವರೊಬ್ಬರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟಿ ಅನುಪ್ರಭಾಕರ ಮಾತನಾಡಿ, "ತಾಯಂದಿರು ರ‍್ಯಾಂಪ್ ಮೇಲೆ ನಡೆಯುವುದನ್ನ ನೋಡುವುದಕ್ಕೆ ಸಂಭ್ರಮ ಎನಿಸುತ್ತದೆ. ಅದರಲ್ಲೂ ಗರ್ಭಿಣಿಯರಿಗೆ ಈ ವೇಳೆ ಈ ರೀತಿಯ ಕಾರ್ಯಕ್ರಮಗಳು ಅವರನ್ನ ಮತ್ತಷ್ಟು ಸಂತೋಷವಾಗಿರುವಂತೆ ಮಾಡಲುವಲ್ಲಿ ನೆರವಾಗುತ್ತವೆ" ಎಂದು ಹೇಳಿದರು.

ತಾಯಂದಿರು ಹಾಗೂ ಗರ್ಭಿಣಿಯರಿಗೆ ಇದೊಂದು ವಿಶೇಷ ಅನುಭವಾಗಿದ್ದು, ಈ ಮೂಲಕ ಅವರು ತಮ್ಮ ಆತಂಕಗಳನ್ನ ಮರೆತು ಸಂತಸದಿಂದ ಕಾಲ ಕಳೆಯಲು ಇದು ನೆರವಾಗಲಿದೆ, ಎಂದು ಕಾರ್ಯಕ್ರಮ ಕುರಿತು ನಟಿ ಸಾಂಘವಿ ತಿಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net