

ಮುಂಡರಗಿ: ಗರ್ಭಾವಸ್ಥೆಯಲ್ಲಿ ಸ್ಕ್ಯಾನಿಂಗ್ ಮಾಡಿಸುವುದು ಅವಶ್ಯಕವಾಗಿರುತ್ತದೆ. ಗರ್ಭದಲ್ಲಿರುವ ಮಗುವಿನ ಆರೋಗ್ಯದ ಸ್ಥಿತಿ ತಿಳಿಯಲು ಸ್ಕ್ಯಾನಿಂಗ್ ಸಹಾಯ ಮಾಡುತ್ತದೆ. ಗರ್ಭಿಣಿಯರಿಗೆ ಉಚಿತವಾಗಿ ಈ ಸೇವೆ ದೊರೆಯಲಿದೆ. ವೈದ್ಯರ ಸಲಹೆ ಮೇರೆಗೆ ಉತ್ತಮ ಚಿಕಿತ್ಸೆ ಪಡೆದು ಮಗುವಿನ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.
ಹೇಮಗಿರೀಶ ಹಾವಿನಾಳ, ಜ್ಯೋತಿ ಹಾನಗಲ್, ಮೈಲಾರಪ್ಪ ಕಲಕೇರಿ, ಅಶೋಕ ಚೂರಿ, ದಾವಲ್ ನಮಾಜಿ, ನಾಗರಾಜ ಗುಡಿಮನಿ, ಡಾ.ಲಕ್ಷ್ಮಣ ಪೂಜಾರ, ಡಾ.ಅಂಜುಮ್ ಕೆ. ಇತರರು ಇದ್ದರು.