

ಕಂಪ್ಲಿ: ಮಾರಕ ರೋಗ ತಡೆಗಟ್ಟಲು ಮಕ್ಕಳು, ಗರ್ಭಿಣಿಯರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಹೇಳಿದರು.
ಪಟ್ಟಣದ ಕೋಟೆ ಪ್ರದೇಶದಲ್ಲಿ ಮಿಷನ್ ಇಂದ್ರಧನುಷ್ 5.0 ಎರಡನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ತೆರಳಿ ಲಸಿಕೆ ಕುರಿತು ಜಾಗೃತಿ ಮೂಡಿಸಬೇಕು. ಸಕಾಲದಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ 12 ಮಾರಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಇದನ್ನೂ ಓದಿ: ಮಿಷನ್ ಇಂದ್ರಧನುಷ್ ಯಶಸ್ಸಿಗೆ ಸೂಚನೆ
ಸಾಂಸ್ಥಿಕ ಹೆರಿಗೆ, ಪೌಷ್ಠಿಕ ಆಹಾರ ಸೇವನೆ ಕುರಿತು ಜಾಗೃತಿ ಮೂಡಿಸಲಾಯಿತು. ಎಂ.ಡಿ.ಕ್ಯಾಂಪ್, ಇಂದಿರಾನಗರ, ಭೋವಿ ಕಾಲನಿಗಳಲ್ಲಿ ಲಸಿಕಾ ಅಭಿಯಾನ ನಡೆಸಲಾಯಿತು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎನ್.ಚನ್ನಬಸವರಾಜ್, ಎಸ್.ಆರ್.ಪ್ರಭಾಕರ್, ಆಶಾ ಕಾರ್ಯಕರ್ತೆಯರಾದ ಆರ್.ವಲಿಮಾ, ಅನುಸೂಯ, ಚಂದ್ರಲೇಖಾ, ಲಕ್ಷ್ಮೀ, ಯು.ಪದ್ಮಾ, ವೆಂಕಟಪದ್ಮಾ ಇತರರಿದ್ದರು.