ಗರ್ಭಿಣಿಯರೇ ಪೌಷ್ಟಿಕ ಆಹಾರ ಸೇವಿಸಿ

17Belavadi2a
Published on

ಮಲ್ಲಮ್ಮನ ಬೆಳವಡಿ: ಆದರ್ಶ ಮಹಿಳೆಯರಿಂದ ಸದೃಢ ಕುಟುಂಬ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಹೆರಿಗೆ ಪೂರ್ವದಲ್ಲಿ ಗರ್ಭಿಣಿಯರು ಕಬ್ಬಿಣಾಂಶವುಳ್ಳ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಡಿಎಚ್‌ಒ ಡಾ.ಐ.ಪಿ.ಗಡಾದ ಹೇಳಿದರು.

ಗ್ರಾಮದ ಮಲ್ಲಮ್ಮ ಸ್ಮಾರಕ ಭವನದಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಮಾಸಾಚರಣೆ ಹಾಗೂ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಡಿಪಿಒ ಅರುಣಕುಮಾರ ಮಾತನಾಡಿದರು.

ಸ್ಥಳೀಯ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಟಿಎಚ್‌ಒ ಡಾ.ಎಸ್.ಎಸ್.ಸಿದ್ದನ್ನವರ, ಡಾ.ನಿತಿನ ವಾಸನದ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ಪಿಡಿಒ ಜಿ.ಐ.ಬರಗಿ, ಮುಖಂಡರಾದ ಪ್ರಕಾಶ ಬಳಿಗಾರ, ಶಶಿಧರ ಪತ್ತಾರ, ಡಾ.ಶ್ರೀಧರ ಮೋಖಾಶಿ, ಬಿ.ಜಿ. ದೇಗಾಂವಿ, ಈರಣ್ಣ ತುರಾಯಿ, ಆನಂದ ಮಪ್ಪಯ್ಯನವರ, ಯಲ್ಲಪ್ಪ ಬಾರ್ಕಿ, ಮಂಜುಳಾ ಮಟ್ಟಿ, ಸುಮಂಗಲಾ ಪರಮನಾಯ್ಕರ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್ ಮುತ್ನಾಳ ಇತರರಿದ್ದರು. ಪ್ರಕಾಶ ಮಾನೆ ಸ್ವಾಗತಿಸಿದರು. ಶಿಲ್ಪ ಗಂಗೊಳ್ಳಿ ನಿರೂಪಿಸಿದರು. ಎಂ.ಎನ್.ಜಂಡೇಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net