ಗರ್ಭಿಣಿಯರು ಪೋಷಕಾಂಶವುಳ್ಳ ಆಹಾರ ಸೇವಿಸಲಿ

16 kudlagi 03
Published on

ಕೂಡ್ಲಿಗಿ: ಗರ್ಭಿಣಿಯರು- ಬಾಣಂತಿಯರು ಪ್ರತಿದಿನ ಊಟದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕು ಎಂದು ಆರೋಗ್ಯ ಸುರಕ್ಷಣಾಧಿಕಾರಿ ಪಿ.ಬಿ. ಗಿರಿಜಾ ಹೇಳಿದರು.

ಪಟ್ಟಣದ 3ನೇ ವಾರ್ಡ್ ವಿದ್ಯಾನಗರದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಿಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಪೋಷಣ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರದಲ್ಲಿ ಮಾತನಾಡಿದರು.

ಗರ್ಭಿಣಿಯರು ನಿತ್ಯ ಸೇವಿಸುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಸಾಮಾನ್ಯ ಮಹಿಳೆಗಿಂತ ಗರ್ಭಿಣಿಯರು ಮೂರು ಪಟ್ಟು ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವಿಸಬೇಕು. ಶಕ್ತಿ ನೀಡುವ, ಪೋಷಕಾಂಶಗಳಿರುವ, ಕ್ಯಾಲಿಯಂ ಮತ್ತು ಕಬ್ಬಿಣಾಂಶ ಇರುವ, ಧಾನ್ಯಗಳು, ಸಿರಿಧಾನ್ಯಗಳು, ಸೊಪ್ಪು-ತರಕಾರಿ, ಹಣ್ಣು, ಹಾಲು, ನುಗ್ಗೆಸೊಪ್ಪು ಸೇವಿಸುವುದರಿಂದ ಎಲ್ಲ ಪೋಷಕಾಂಶಗಳು ಲಭಿಸುತ್ತವೆ. ಗರ್ಭಿಣಿಯರಿಗೆ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ಗರ್ಭದಲ್ಲಿರುವ ಭ್ರೂಣಕ್ಕೆ ಚೆನ್ನಾಗಿ ಕ್ಯಾಲ್ಸಿಯಂ ಪೂರೈಕೆಯಾದಲ್ಲಿ ಶಿಶುವಿನ ಮೂಳೆಗಳು ಶಕ್ತಿಯುತವಾಗಿರುತ್ತವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net