ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

Untitled design
ಕರೇಕಲ್ಲು ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು. ಪಿಡಿಒ ಬಸಮ್ಮ, ಮೇಲ್ವಿಚಾರಕಿ ಯು.ಪಿ.ತಪಸ್ವಿ, ಕಾರ್ಯಕರ್ತೆಯರಾದ ಜಲಜಾಕ್ಷಿ, ಸುಪ್ರಿಯಾ, ಅನ್ನಪೂರ್ಣ ಇತರರಿದ್ದರು.
Published on

ಕಾನಹೊಸಹಳ್ಳಿ: ಗರ್ಭಿಣಿಯರು ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಗ್ರಾಪಂ ಪಿಡಿಒ ಬಸಮ್ಮ ಬಿ. ಹೇಳಿದರು.


ಪಟ್ಟಣ ಕರೇಕಲ್ಲು ವಾರ್ಡ್ ನಂ.9ರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗರ್ಭಿಣಿಯರು ಅಪೌಷ್ಟಿಕದಿಂದ ಬಳಲುತ್ತಿದ್ದರೆ ಹೆರಿಗೆ ಸಮಯದಲ್ಲಿ ತೀವ್ರ ತೊಂದರೆ ಆಗಲಿದೆ. ಅಲ್ಲದೆ ಕಡಿಮೆ ತೂಕದ ಮಗು ಜನಿಸುವ ಸಾಧ್ಯತೆ ಇದೆ. ಆದ್ದರಿಂದ ಸೊಪ್ಪು, ತರಕಾರಿ, ಮೊಳಕೆಕಾಳು, ಬಾಳೆಹಣ್ಣು, ಮೊಟ್ಟೆ ಸೇರಿ ಇತರ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಜತೆಗೆ ನಿಯಮಿತವಾಗಿ ಯೋಗ ಮಾಡಬೇಕು ಎಂದು ತಿಳಿಸಿದರು.


ಮೇಲ್ವಿಚಾರಕಿ ಯು.ಪಿ.ತಪಸ್ವಿ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹದಿಹರೆಯದ ಯುವತಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಅವರಿಗೆ ಪೌಷ್ಟಿಕ ಆಹಾರ ಒದಗಿಸುವುದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಹಾಗೂ ಅಪೌಷ್ಟಿಕ ಹೋಗಲಾಡಿಸುವುದು ಪೋಷಣ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.


ಗ್ರಾಪಂ ಸದಸ್ಯರಾದ ರಂಗನಾಥನಹಳ್ಳಿ ಜಲಜಾಕ್ಷಿ, ಆರೋಗ್ಯ ಇಲಾಖೆಯ ಎಲ್‌ಎಚ್‌ವಿ ಸುಪ್ರಿಯಾ, ಸವಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಶಶಿರೇಖಾ, ಗೌರಿ, ಮಂಜುಳಾ, ಸುಮಿತ್ರಾ, ಮಂಗಳಾ, ಗಾಯತ್ರಿ, ನಂದಿನಿ ಷಾಹಿಮಾ ಖಾನ್, ಸುಮಂಗಳಾ, ತಿಪ್ಪಮ್ಮ, ಜ್ಯೋತಿ, ಅನ್ನಪೂರ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net