ಗರ್ಭಿಣಿಯರೇ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಿ: ಡಾ.ಯಾಸ್ಮಿನ್​ ಕರೆ

9Anand2
ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭವತಿಯರಿಗಾಗಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಡಾ.ಯಾಸ್ಮಿನ್​ ಉದ್ಟಾಟಿಸಿದರು. ಡಾ.ಎಂ.ವಿ. ಕಿವಡಸನ್ನವರ, ಡಾ.ಆರ್​.ಎಸ್​. ಪಟೇಲ್​, ಡಾ.ಬಿ.ಟಿ.ಚೇತನ್​ ಇತರರಿದ್ದರು.
Published on

ಬೆಳಗಾವಿ: ಗರ್ಭಿಣಿಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಆತಂಕ, ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಕಾಹೆರ್​ ಆಪ್ತ ಸಮಾಲೋಚಕಿ ಹಾಗೂ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಯಾಸ್ಮಿನ್​ ಹೇಳಿದರು.

ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಎಲ್​ಇ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆ್ಯಂಡ್​ ರಿರ್ಸಚ್​ (ಕಾಹೆರ್​), ಕೌನ್ಸೆಲಿಂಗ ಸೆಲ್​ ಮತ್ತು ಮನೋವಿಜ್ಞಾನ ವಿಭಾಗ ಹಾಗೂ ಯುನೈಟೆಡ್​ ಸಮಾಜ ಕಲ್ಯಾಣ ಸಂಸ್ಧೆಯಿಂದ ಬುಧವಾರ ಗರ್ಭವತಿಯರಿಗಾಗಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗತಜ್ಞೆ ಆರತಿ ಸಂಕೇಶ್ವರಿ ಮಾನಸಿಕ ಆರೋಗ್ಯಕ್ಕಾಗಿ ಯೋಗ&ಧ್ಯಾನದ ಮಹತ್ವ ವಿವರಿಸಿದರು. ಮನ@ಶಾಸ ಅಧ್ಯಾಪಕಿ ಭೈರವಿ ಪಾರಿಶ್ವಾಡ, ಡಾ.ಗೀತಾ ಕಾಂಬಳೆ, ಜಿಲ್ಲಾ ಕುಷ್ಠರೋಗ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎಂ.ವಿ. ಕಿವಡಸನ್ನವರ, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್​.ಎಸ್​. ಪಟೇಲ್​, ಡಾ.ಬಿ.ಟಿ.ಚೇತನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net