

ಗುಳೇದಗುಡ್ಡ: ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ ಜಾರಿಗೊಳಿಸಿದ್ದು, ಗರ್ಭಿಣಿಯರು, ಬಾಣಂತಿಯರು ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಾಲೂಕು ಹಿರಿಯ ಮೇಲ್ವಿಚಾರಕಿ ಶಶಿಕಲಾ ಚನ್ನಪ್ಪಗೌಡರ ಹೇಳಿದರು.
ಅಕ್ಕಲಕೋಟೆ ಶಿವಶರಣರ ಮಠದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಲಯಮಟ್ಟದ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪೌಷ್ಟಿಕ ಆಹಾರ ಸೇವಿಸುವುದರಿಂದ ರಕ್ತಹೀನತೆ, ಕ್ಯಾಲ್ಸಿಯಂ ಕಡೆಮೆಯಾಗಿ ಇದರಿಂದ ಜನಿಸುವ ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ. ಆದ್ದರಿಂದ ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕಾಂಶ ಪದಾರ್ಥಗಳಾದ ತರಕಾರಿ, ಮೊಟ್ಟೆ, ಹಸಿಕಾಳು, ಗಜ್ಜರಿ, ಗೆಣಸು, ಬಟಾಟೆ, ಮೂಲಂಗಿ ಸೇವಿಸಬೇಕು. ಒಂದು ವರ್ಷದೊಳಗಿನ ಮಕ್ಕಳ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳು ವಿವಿಧ ವೇಷಧರಿಸಿ ಗಮನ ಸೆಳೆದರು.
ಅಂಗನವಾಡಿ ಮೇಲ್ವಿಚಾರಕಿ ಭುವನೇಶ್ವರಿ ಬರಹಾಣಪೂರ, ಮಕ್ಕಳ ರಕ್ಷಣಾ ಘಟಕದ ಸದಸ್ಯ ಜಯಶ್ರೀ ಕಳಸಾ, ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ಜ್ಯೋತಿ ಆಲೂರ, ವಲಯ ಮೇಲ್ವಿಚಾರಕಿ ಜಯಶ್ರೀ ಬಿರಾದಾರ, ಶಾರದಾ ಕೋಲಾರ, ಹಿರಿಯ ಆರೋಗ್ಯ ಸಹಾಯಕಿ ಎಸ್.ಎಸ್. ನಂದಿಕೋಲಮಠ, ಮುಬಾರಕ ಮಂಗಳೂರು, ಮಹಿಬೂಬ ಬಾಗವಾನ, ಅಂಗನವಾಡಿ ಕಾರ್ಯಕರ್ತರಾದ ದ್ರಾಕ್ಷಾಯಣಿ ಯಂಡಿಗೇರಿ, ನಾಗರತ್ನ ಮೊಳಗಾವಿ, ಆರ್.ಪಿ. ಪಟ್ಟಣದ, ಎ.ಆರ್ .ಅಂಗಡಿ, ಎಂ.ಜೆ. ವರದನ್ನವರ, ಜಿ.ಎಸ್. ತೆಗ್ಗಿ, ಎಸ್.ಎಸ್. ಇದ್ದಲಗಿ, ಜೆ.ಎಸ್. ಜೋಶಿ, ಟಿ.ಎಸ್. ಶೆಟ್ಟರ ಇತರರಿದ್ದರು.