ಹಾಲಿನಲ್ಲಿ ವಿಷ ಬೆರಸಿ ಭ್ರೂಣ ಹತ್ಯೆ ಮಾಡಿದ ಪತಿ, ಅತ್ತೆ

hubli jan 31 2020
Published on

ಹುಬ್ಬಳ್ಳಿ: ಪತಿ ಹಾಗೂ ಅತ್ತೆ ಸೇರಿ ಔಷಧಿ ಎಂದು ಗರ್ಭೀಣಿಗೆ ವಿಷ ಕುಡಿಸಿ ಭ್ರೂಣ ಹತ್ಯೆ ಮಾಡಿರುವ ಅಮಾನವೀಯ ಘಟನೆ ಹಳೇ ಹುಬ್ಬಳ್ಳಿಯ ಅಲ್ತಾಫ್ ಫ್ಲಾಟ್​​​ನಲ್ಲಿ ನಡೆದಿದೆ.

ಪತಿ ಇಮಾಮ್​ ಖಾನಜಾದೆ ಹಾಗೂ ಅತ್ತೆ ಫಾತಿಮಾ ಖಾನಜಾದೆ ಕೃತ್ಯ ಎಸಗಿದವರು. ವಿಷ ಸೇವಿಸಿದ ಶಾಹಿನಾ ಗರ್ಭದಲ್ಲಿದ್ದ ಭ್ರೂಣ ಮೃತಪಟ್ಟಿದೆ.

ಶಹಿನಾ ಹಾಗೂ ಇಮಾಮ್​ ಮದುವೆ ವರ್ಷದ ಹಿಂದೆ ನಡೆದಿತ್ತು. ಮದುವೆ ನಂತರ ಇಮಾಮ್​ ಹಾಗೂ ಅವರ ತಾಯಿ ಶಹಿನಾ ಅವರಿಗೆ ಹಿಂಸೆ ನೀಡುತ್ತಿದ್ದರು. ಇತ್ತೀಚೆಗೆ ಶಹಿನಾ ಅವರನ್ನು ತವರು ಮನೆಗೆ ಕಳುಹಿಸಿದ್ದರು. ಹಿರಿಯರು ರಾಜಿ ಮಾಡಿಸಿ ಮತ್ತೆ ಮನೆಗೆ ಬಿಟ್ಟಿದ್ದರು.

ಹಾಲಿನಲ್ಲಿ ವಿಷ ಸೇರಿಸಿ ಶಹಿನಾ ಅವರಿಗೆ ಕುಡಿಸಿದ್ದರು. ವಿಷ ಸೇವಿಸಿದ ನಂತರ ಆಕೆಗೆ ಹೊಟ್ಟೆ ನೋವು ತೀವ್ರಗೊಂಡಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಭ್ರೂಣ ಮೃತಪಟ್ಟಿತ್ತು. ವೈದ್ಯರು ಭ್ರೂಣವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಕಸಬಾ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net