Video | ಭೀಕರ ಅಪಘಾತ: ಗರ್ಭಿಣಿ ಸೇರಿ ನಾಲ್ವರಿಗೆ ಡಿಕ್ಕಿ ಹೊಡೆದ ಕಾರು; ಗರ್ಭಿಣಿಯ ಸ್ಥಿತಿ ಗಂಭೀರ..

accident
Published on

ಉಡುಪಿ: ಅತಿವೇಗವಾಗಿ ಬಂದ ಕಾರು ಗರ್ಭಿಣಿ ಸಹಿತ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಉಡುಪಿಯ ಕಡಿಯಾಳಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.

ಗರ್ಭಿಣಿ ಹಾಗೂ ಇತರ ಮೂವರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಈ ನಾಲ್ವರಿಗೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಗರ್ಭಿಣಿ ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನು ಮೂವರು ಸಣ್ಣಪುಟ್ಟ ಗಾಯಗಳಿಗೊಳಗಾಗಿ ಪಾರಾಗಿದ್ದಾರೆ.

ಮಣಿಪಾಲದಿಂದ ಅತಿವೇಗವಾಗಿ ಉಡುಪಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದ ಈ ದೃಶ್ಯಾವಳಿ ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net