

ಲಕ್ಷ್ಮೇಶ್ವರ: ಪಟ್ಟಣದ ಪಶು ಆಸ್ಪತ್ರೆಯ ಕೊರತೆ ನೀಗಿಸಲು ವಿಶೇಷ ಪ್ರಯತ್ನ ಮಾಡುವುದರ ಜತೆಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಆರ್‌ಐಡಿಎಫ್ ಯೋಜನೆಯಡಿ 50.13 ಲಕ್ಷ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಶು ಆಸ್ಪತ್ರೆಗಳಲ್ಲಿ ಲಸಿಕಾ ಕಾರ್ಯಕ್ರಮ, ಅವಶ್ಯಕ ಸಿಬ್ಬಂದಿ ನೇಮಕ, ಅವಶ್ಯವಿರುವ ಸಲಕರಣೆ ಸೇರಿದಂತೆ ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಮಾಡುತ್ತೇನೆ ಎಂದರು.
ಪಶು ವೈದ್ಯಾದಿಕಾರಿ ಡಾ. ನೀಲಕಂಠ ಹವಳದ, ಡಾ. ವೇದಾವತಿ, ನಗರ ಬಿಜೆಪಿ ಅಧ್ಯಕ್ಷ ದುಂಡೇಶ ಕೊಟಗಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಗಂಗಾಧರ ಮೆಣಸಿನಕಾಯಿ, ನಿಂಗಪ್ಪ ಬನ್ನಿ, ರಮೇಶ ಹಾಳದೋಟದ, ಸಂಗಮೇಶ ಬೆಳವಲಕೊಪ್ಪ, ನವೀನ ಬೆಳ್ಳಟ್ಟಿ, ಎಂ.ಆರ್. ಪಾಟೀಲ, ಶಕ್ತಿ ಕತ್ತಿ, ವಿಶಾಲ ಬಟಗುರ್ಕಿ, ಟಾಕಪ್ಪ ಸಾತಪುತೆ, ಬಸವರಾಜ ಕಲ್ಲೂರ, ಅನಿಲ ಮುಳಗುಂದ, ಬಸವರಾಜ ಚಕ್ರಸಾಲಿ, ಗಿರೀಶ ಚೌರಡ್ಡಿ, ಉಳವೇಶಗೌಡ ಪಾಟೀಲ, ಅಭಯ ಜೈನ್, ಈರಣ್ಣ ಅಕ್ಕೂರ, ಗುತ್ತಿಗೆದಾರ ನಾಗಲಿಂಗಸ್ವಾಮಿ, ಇಂಜಿನಿಯರ್ ಮಾಲತೇಶ ಹೊಸಗೌಡ್ರ ಇತರರು ಇದ್ದರು.