ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ಆದ್ಯತೆ

BYD-GURU
Published on

ಬ್ಯಾಡಗಿ: ಕಾಗಿನೆಲೆ ಕನಕ ಗುರುಪೀಠ ಧಾಮಿರ್ಕ ಕಾರ್ಯಗಳ ಜತೆ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಆದ್ಯತೆ ನೀಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಕಾಗಿನೆಲೆಯ ಕನಕ ಗುರುಪೀಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಶ್ರೀಗಳ 18ನೇ ಪುಣ್ಯಾರಾಧನೆ ಹಾಗೂ ಗುರುಪೂಣಿರ್ಮೆ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚಿನ ಕಾಲದಿಂದಲೂ ಗುರುಶಿಷ್ಯ ಪರಂಪರೆಗೆ ಮಹತ್ವವಿದೆ. ಪ್ರತಿಯೊಬ್ಬರೂ ಜೀವನ ಅಭ್ಯುದಯಕ್ಕೆ ಗುರುವಿನ ಮಾರ್ಗದರ್ಶನ ಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮಕುತಿ ಎನ್ನುವ ದಾಸರ ವಾಣಿ ಅಕ್ಷರಶ ಸತ್ಯವಾಗಿದೆ. ವಿದ್ಯೆ ಪಡೆಯಲು ವಿನಯತೆ ತೋರಬೇಕಿದೆ. ವಿದ್ಯೆ ಸಾಧಕನ ಸೊತ್ತು ಹೊರತು, ಶ್ರೀಮಂತಿಕೆಯ ಸೊತ್ತಲ್ಲ ಎಂಬುದು ಸಾಧಕರಿಂದ ತಿಳಿದಿದೆ. ಸುಸಂಸತ ಸಮಾಜಕ್ಕೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕನಕದಾಸರು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಕನಕ ಉದ್ಯಾನದಲ್ಲಿ ಅವರ ಜೀವನ ಚರಿತ್ರೆಯ ಎಲ್ಲ ನೈಜ ಟನೆಗಳ ಚಿತ್ರಾವಳಿ ನಿಮಿರ್ಸಿದ್ದು, ಪ್ರವಾಸಿಗರನ್ನು ಆಕಷಿರ್ಸುತ್ತಿದೆ ಎಂದರು.

ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳಿಗೆ ಭಕ್ತರು ಗುರುಸಮರ್ಪಣೆ ಸಲ್ಲಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್​.ಎಂ. ರೇವಣ್ಣ, ಕೆಲ್ಲೋಡ ಮಠದ ಈಶ್ವರಾನಂದಪುರಿ, ಕೆ.ಆರ್​. ನಗರದ ಶ್ರೀ ಶಿವಾನಂದ ಪುರಿ ಶ್ರೀಗಳು, ಸರೂರಿನ ರೇವಣಸಿದ್ಧೇಶ್ವರ ಶ್ರೀಗಳು, ಕೆರೂರಿನ ಚಿನ್ಮಯಾನಂದ ಶ್ರೀಗಳು, ರಾಮಾನಂದಪುರಿ ಶ್ರೀಗಳು, ಬಾಗಲಕೋಟೆಯ ಕುರುಬರ ಸಂದ ಅಧ್ಯಕ್ಷ ಡಿ.ಬಿ. ಸಿದ್ದಾಪುರ, ಎಸ್​.ಡಿ. ಜೋಗಿನ, ಎಸ್​.ಎನ್​. ಗಾಜೀಗೌಡ್ರ, ಪುರಸಭೆ ಸದಸ್ಯ ಮಂಜಪ್ಪ ಬಣಕಾರ, ಎಸ್​. ನಿಂಗಪ್ಪ, ಶಂಕ್ರಪ್ಪ ಮಾತನವರ, ಬೀರಪ್ಪ ಕಾಗಿನೆಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net