ಪಠ್ಯಪುಸ್ತಕದಲ್ಲಿ ಸ್ಥಳೀಯ ವಿಷಯಕ್ಕೆ ಅವಕಾಶ

Prasaranga text books
Published on

ಮಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಆಯಾ ಪ್ರದೇಶದ ಜ್ಞಾನ, ಕೌಶಲ ಮತ್ತು ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಪಠ್ಯಗಳಲ್ಲಿ ಜಾಗತಿಕ ಮತ್ತು ಸಾರ್ವಕಾಲಿಕ ಅಂಶಗಳೊಂದಿಗೆ ಸ್ಥಳೀಯತೆಗೆ ಒತ್ತು ಸಿಕ್ಕಾಗ ಇದು ಸಾಧ್ಯ. ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸುತ್ತಿರುವ ಕನ್ನಡ ಪಠ್ಯಪುಸ್ತಕಗಳಲ್ಲಿ ಸ್ಥಳೀಯತೆಗೆ ಅವಕಾಶ ಒದಗಿರುವುದು ಸಂತೋಷದ ವಿಷಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಪದವಿ ತರಗತಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರಿನ 12 ಕನ್ನಡ ಪಠ್ಯಪುಸ್ತಕಗಳನ್ನು ಗುರುವಾರ ಸಿಂಡಿಕೇಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಏಕಕಾಲದಲ್ಲಿ ಪ್ರಸಾರಾಂಗ 12 ಕನ್ನಡ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡುತ್ತಿರುವುದು ಪ್ರಶಂಸಾರ್ಹ ಎಂದು ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಹೇಳಿದರು.

ಪ್ರಸಾರಾಂಗ ನಿರ್ದೇಶಕ ಪ್ರೊ.ಅಭಯಕುಮಾರ್, ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ಸೋಮಣ್ಣ, ಪ್ರಸಾರಾಂಗ ಸಹಾಯಕ ನಿರ್ದೇಶಕ ಡಾ.ಧನಂಜಯ ಕುಂಬ್ಳೆ, ಪಠ್ಯಪುಸ್ತಕಗಳ ಕಾರ್ಯನಿರ್ವಾಹಕ ಸಂಪಾದಕ ಡಾ.ಮಾಧವ ಮೂಡುಕೊಣಾಜೆ ಉಪಸ್ಥಿತರಿದ್ದರು.

12 ಕೃತಿಗಳ ಬಿಡುಗಡೆ: ಪದವಿ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಭಾಷಾ ಪಠ್ಯಗಳಾದ ಕಲಾಗಂಗೋತ್ರಿ, ವಿಜ್ಞಾನ ಗಂಗೋತ್ರಿ, ಗಣಕ ಗಂಗೋತ್ರಿ, ನಿರ್ವಹಣಾ ಗಂಗೋತ್ರಿ, ವಾಣಿಜ್ಯ ಗಂಗೋತ್ರಿ, ಐಚ್ಛಿಕ ಪಠ್ಯ ಸಾಹಿತ್ಯ ಗಂಗೋತ್ರಿ, ಬಹುಆಯ್ಕೆ ಪಠ್ಯಗಳಾದ ಬಹುರೂಪಿ 1,2,3 ಮತ್ತು 4 ಹಾಗೂ ಚತುರ್ಥ ಸೆಮಿಸ್ಟರ್ ಭಾಷಾ ಪಠ್ಯಗಳಾದ ನುಡಿಸಾಲು ಮತ್ತು ನುಡಿನೋಟ ಹೀಗೆ ಒಟ್ಟು 12 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಗುರುವಾರವೇ ಪಠ್ಯಪುಸ್ತಕಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net