ಮನೆ ಮದ್ದು ಬಳಕೆ ಆದ್ಯತೆ ನೀಡಿ

Prefer the use of home remedies
ತಿಕೋಟಾ ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಋತು ನೈರ್ಮಲ್ಯ ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಡಾ.ರಾಜೇಶ್ವರಿ ಭಜಂತ್ರಿ ಮಾತನಾಡಿದರು. ಪ್ರೊ.ಆರ್.ಬಿ. ಸಿರಸಂಗಿ, ಎಲ್.ಬಿ.ದೇಸಾಯಿ ಇದ್ದರು.
Published on

ತಿಕೋಟಾ: ಮೊದಲ ಬಾರಿ ಮುಟ್ಟಾದಾಗ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಗೊಂದಲ ಮತ್ತು ಆತಂಕ ಉಂಟಾಗುತ್ತದೆ. ಅದಕ್ಕೆ ಭಯಪಡಬಾರದು ಎಂದು ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಎಚ್.ಒ ಡಾ.ರಾಜೇಶ್ವರಿ ಭಜಂತ್ರಿ ಹೇಳಿದರು.

ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಐಕ್ಯೂಎಸಿ, ಮಹಿಳಾ ಸಬಲೀಕರಣ ಘಟಕ, ಕಾಲೇಜು ಶಿಕ್ಷಣ ಇಲಾಖೆ, ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ವಿಶ್ವ ಋತು ನೈರ್ಮಲ್ಯ ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವು ಮಹಿಳೆಯರಿಗೆ ಮುಟ್ಟಿನ ಸಮಯ ನಿಜವಾಗಿಯೂ ನೋವಿನಿಂದ ಕೂಡಿರುತ್ತದೆ. ಇದರ ಜೊತೆಗೆ ತೀವ್ರವಾದ ಸೆಳೆತ, ಬೆನ್ನು ನೋವು ಇತ್ಯಾದಿಗಳು ಸಹ ಇರುತ್ತದೆ. ಕೆಲವು ಮನೆ ಮದ್ದುಗಳ ಬಳಕೆ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಎಲ್ಲ ಕಾಯಿಲೆಗಳನ್ನು ಗುಣಪಡಿಸಬಹುದು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಆರ್.ಬಿ. ಸಿರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರುಷ-ಮಹಿಳೆ ಎಂಬ ಭೇದಭಾವ ಮಾಡದೆ ಎಲ್ಲರೂ ಮುಕ್ತವಾಗಿ ಇಂತಹ ವಿಷಯಗಳನ್ನು ತಿಳಿದು ಕಿರಿಯರು ಹಾಗೂ ಅನಕ್ಷರಸ್ಥರಿಗೆ ಸಲಹೆ ನೀಡಬೇಕು ಎಂದು ಹೇಳಿದರು.

ಮಹಿಳಾ ಸಬಲೀಕರಣ ಘಟಕದ ಮುಖ್ಯಸ್ಥ ಎಲ್.ಬಿ.ದೇಸಾಯಿ, ಆರ್.ಕೆ.ಎಸ್.ಕೆ ಸಮಾಲೋಚಕ ಗೋಪಾಲ ರಬಕವಿ ಮಾತನಾಡಿದರು. ಪವಿತ್ರಾ ನಡುವಿನಮನಿ ನಿರೂಪಿಸಿದರು. ಪೃಥ್ವಿ ಕೆಂದ್ರಾಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net