ಮಣ್ಣಿನ ಮೂರ್ತಿಗಳಿಗೆ ಆದ್ಯತೆ ನೀಡಿ

3 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ನಂದಿಕೋಲ ಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್​ ಆಫ್​ ಧಾರವಾಡ ಸೆಂಟ್ರಲ್​ ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಕ್ಲಬ್​ ಅಧ್ಯಕ್ಷ ಕರಣ ದೊಡವಾಡ ಮಾತನಾಡಿ, ಪಿಒಪಿ ಹಾಗೂ ರಾಸಾಯನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಜಲ ಮೂಲಗಳು ಹಾಳಾಗಲಿವೆ. ಹೀಗಾಗಿ ಎಲ್ಲರೂ ಪರಿಸರ ಸ್ನೇಹಿ, ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿ ಮಾಡಿದರು.
ಕಲಾವಿದ ಮಂಜುನಾಥ ಹಿರೇಮಠ ಅವರು ಸುಲಭವಾಗಿ 2 ತಾಸಿನಲ್ಲಿ ಗಣೇಶ ರಚನೆ ಮಾಡುವ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಇದಲ್ಲದೆ ಮೂರ್ತಿ ತಯಾರಿಕೆ ವೇಳೆ ಹಿಂಬದಿಯಲ್ಲಿ ಒಂದು ಬೀಜದ ಉಂಡೆ ಇಡಲಾಗುತ್ತದೆ. ವಿಸರ್ಜನೆ ಜತೆಗೆ ಮಣ್ಣು ಬೆರೆತು ಗಿಡವಾಗಿ ಬೆಳೆಯಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದರು.
ವಾಮನ ಮಂತ್ರಿ, ವೀರೇಶ ಕೆಲಗೇರಿ, ಉದಯ ಯಂಡಿಗೇರಿ, ಗುಲಶನ್​ ಸಿಂಗ್​ ನವಲೂರ, ಗದಗಯ್ಯ ಹಿರೇಮಠ, ಜಯಶ್ರೀ ಯಂಡಿಗೇರಿ, ಮಂಗಲಾ ಕುಲಕರ್ಣಿ, ವಿವಿಧ ಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net