

ಹೆಬ್ರಿ: ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜ.10 ರಿಂದ 12ರ ತನಕ ನಡೆದ ಫಸ್ಟ್ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್‌ಷಿಪ್ 2025ರಲ್ಲಿ ಕ್ರೀಡಾ ಸಾಧಕಿ ಹೆಬ್ರಿಯ ಪ್ರೀತಿ ಬಸನಗೌಡ ಬಿರಾದಾರ 4*400ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. 5 ಸಾವಿರ ಮೀಟರ್ ವಾಕ್ ರೇಸ್‌ನಲ್ಲಿ 4ನೇ ಸ್ಥಾನದೊಂದಿಗೆ ಸಾಧನೆಗೈದಿದ್ದಾರೆ.
ಶ್ರೀಲಂಕಾ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕೇರಳದ ಸಾಧಕ ಕ್ರೀಡಾಪಟುಗಳು ಫಸ್ಟ್ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್‌ಷಿಪ್ 2025 ರಲ್ಲಿ ಭಾಗವಹಿಸಿದ್ದರು.