

ಕೋಟ: ಯುವ ಜನಾಂಗ ಮಾದಕ ವ್ಯಸನಗಳ ದಾಸರಾಗುತ್ತಿದ್ದಾರೆ. ಈ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ. ಇಂತಹ ವ್ಯಕ್ತಿಗಳ ಬಗ್ಗೆ ಅನುಮಾನ ಬಂದಲ್ಲಿ ಪೊಲೀಸ್ ಇಲಾಖೆಗೆ ವಾಹಿತಿ ನೀಡಬೇಕು ಎಂದು ಉಡುಪಿ ಡಿವೈಎಸ್‌ಪಿ ಡಿ.ಟಿ.ಪ್ರಭುದೇವ ಹೇಳಿದರು.
ಕೋಟ ಆಶ್ರಿತ್ ಟ್ರಸ್ಟ್, ಕೋಟ ಪೊಲೀಸ್ ಠಾಣೆೆ, ಎನ್‌ಎಸ್‌ಎಸ್ ಟಕ, ಮಾದಕದ್ರವ್ಯ ವಿರೋಧಿ ಸಮಿತಿ ಆಶ್ರಿತ್ ನರ್ಸಿಂಗ್, ಕೋಟ ಪ್ಯಾರಾ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನಮುಕ್ತ ಅಭಿಯಾನ, ಜನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಕೋಟ ಅಮೃತೇಶ್ವರಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ.ವಿದ್ಯಾಧರ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕೋಟ ಪೊಲೀಸ್ ಠಾಣೆ ಕ್ರೈಂ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಪ್ರಾಂಶುಪಾಲ ಡಾ.ಮೋಹನ್ ಎಸ್. ಇದ್ದರು. ಅಮೃತೇಶ್ವರಿ ದೇಗುಲದಿಂದ ಆಶ್ರಿತ್ ಕಾಲೇಜು ತನಕ ಜಾಗೃತಿ ಜಾಥಾ ನಡೆಯಿತು. ಉಪನ್ಯಾಸಕ ಮೆಲ್ವಿನ್ ಸ್ವಾಗತಿಸಿದರು. ಭಾಗ್ಯಶ್ರೀ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಆನ್ನಿ ಜೆಸಿಂತಾ ವಂದಿಸಿದರು.