ಹಾಕಿ ಉತ್ಸವಕ್ಕೆ ಪೂರ್ವ ಸಿದ್ಧತೆ ಪ್ರಾರಂಭ

2--npk--1
Published on


ಮಡಿಕೇರಿ: ಕುಂಡ್ಯೋಳಂಡ ಕೊಡವ ಕೌಟುಂಬಿಕ-2024ರ ಹಾಕಿ ಉತ್ಸವ ಯಶಸ್ವಿಯಾಗಿ ಸಂಘಟಿಸಲು ಕುಂಡ್ಯೋಳಂಡ ಕುಟುಂಬಸ್ಥರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ತಿಳಿಸಿದರು.


ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಹಾಕಿ ಉತ್ಸವ ಪೂರ್ವ ತಯಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.


ಕೊಡವ ಹಾಕಿ ಅಕಾಡೆಮಿಯ ಅನುಮತಿ ಮೇರೆಗೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಏಪ್ರಿಲ್ ತಿಂಗಳಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಗ್ಯಾಲರಿ ನಿರ್ಮಾಣ, ಮೈದಾನ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅದಕ್ಕೂ ಮುನ್ನ ಮೈದಾನದ ಸಿದ್ಧತೆಗಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.


ಹಾಕಿ ಉತ್ಸವದ ಸಂಚಾಲಕ ದಿನೇಶ್ ಕಾರ್ಯಪ್ಪ, ಖಜಾಂಚಿ ವಿಷು ಪೂವಯ್ಯ, ಕಾರ್ಯದರ್ಶಿ ಬಿಪಿನ್ ಬೆಳ್ಳಿಯಪ್ಪ, ಟೂರ್ನಿಯಾ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ, ಕೆಪಿಎಸ್ ಶಾಲಾ ಪ್ರಾಂಶುಪಾಲರಾದ ವಿಶಾಲ ಕುಶಾಲಪ್ಪ, ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್, ಶಿಕ್ಷಕಿ ಉಷಾರಾಣಿ ಹಾಗೂ ಕುಂಡ್ಯೋಳಂಡ ಕುಟುಂಬದ ಸದಸ್ಯರು ಇನ್ನಿತರವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net