ಮುಂಗಾರು ಪೂರ್ವ ಗಾಳಿ, ಮಳೆ ಮೆಸ್ಕಾಂಗೆ 11.73 ಕೋಟಿ ರೂ. ನಷ್ಟ.

ಮೆಸ್ಕಾಂ
ಮೆಸ್ಕಾಂ
Published on
ಮಂಗಳೂರು : ಮುಂಗಾರು ಪೂರ್ವ ಗಾಳಿ, ಮಳೆಗೆ ವಿದ್ಯುತ್ ಕಂಬಗಳು, ಪರಿವರ್ತಕಗಳು ಸೇರಿದಂತೆ 1173.68 ಲಕ್ಷ ರೂ. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ.
2026ರ ಏ.1ರಿಂದ ಜೂ.1 ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 318.66 ಲಕ್ಷ ರೂ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 321.40 ಲಕ್ಷ ರೂ.ಮೊತ್ತದ ಆಸ್ತಿಗಳಿಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 221.62 ಲಕ್ಷ ರೂ. ಮತ್ತು ಶಿವಮೊಗ್ಗದಲ್ಲಿ 312 ಲಕ್ಷ ರೂ.ಮೊತ್ತದ ಆಸ್ತಿಗಳು ಹಾನಿಗೊಳಗಾಗಿದ್ದು, ಬಹುತೇಕ ಸಮಸ್ಯೆ ಬಗೆಹರಿಸಲಾಗಿದೆ.
8147 ಕಂಬಗಳು ಧರಾಶಾಯಿ:
ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಗಾಳಿ, ಮಳೆಗೆ ಒಟ್ಟು 8147 ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 2797 ಕಂಬಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ 2438, ಉಡುಪಿ ಜಿಲ್ಲೆಯಲ್ಲಿ 1031 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1881 ಕಂಬಗಳು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ 12, ಶಿವಮೊಗ್ಗದಲ್ಲಿ 17 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ, ದ.ಕ.ಜಿಲ್ಲೆಯಲ್ಲಿ 121.90 ಕಿ.ಮೀ., ಉಡುಪಿ ಜಿಲ್ಲೆಯಲ್ಲಿ 11.70 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 37.62 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 56.83 ಕಿ.ಮಿ.ವಿದ್ಯುತ್ ಮಾರ್ಗ ಹಾನಿಗೊಂಡಿದ್ದು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net