ಯಳಂದೂರು: ಸುತ್ತೂರು ಮಹಾಸಂಸ್ಥಾನ ಮಠದ ವತಿಯಿಂದ 18ನೇ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಜುಲೈ ತಿಂಗಳ 4ನೇ ವಾರದಲ್ಲಿ ಯಳಂದೂರಿನಲ್ಲಿ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ.
ಈ ಸಂಬಂಧ ಜೂ.10 ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು ವಿವಿಧ ಪ್ರಗತಿಪರ ತಾಲೂಕಿನ ಸಂಘಟನೆಗಳ ಸದಸ್ಯರು ಆಸಕ್ತರು ಭಾಗವಹಿಸಬೇಕೆಂದು ಶ್ರೀ ಸುತ್ತೂರು ಮಹಾಸಂಸ್ಥಾನದ ಮಠದ ಪ್ರಕಟಣೆ ತಿಳಿಸಿದೆ.