

ತರೀಕೆರೆ: ಎಂ.ಸಿ.ಹಳ್ಳಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪಿಸಲು ಸದ್ಯದಲ್ಲೇ ಶಿಕ್ಷಣ ಸಚಿವರ ಜತೆ ಮಾತುಕತೆ ನಡೆಸಿ ಮುಂದಿನ ಶೈಕ್ಷಣಿಕ ಸಾಲಿನಿಂದ ಕಾಲೇಜು ಆರಂಭಕ್ಕೆ ಬೇಕಾದ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಎಂ.ಸಿ.ಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಾಗೂ 15ನೇ ಹಣಕಾಸು ಯೋಜನೆಯಡಿ 57.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಅಧಿವೇಶನದಲ್ಲಿ ಗಮನ ಸೆಳೆದ ಪರಿಣಾಮ ಈ-ಸ್ವತ್ತಿನ ಸಮಸ್ಯೆಗೆ ಕಾಯಕಲ್ಪ ಸಿಕ್ಕಿದೆ. ರಾಜ್ಯದಲ್ಲಿ ಈ ಸಲುವಾಗಿ ಹೊಸ ಕಾನೂನು ರೂಪಿತವಾಗಿದ್ದು, ಇದರಿಂದ ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳನ್ನೊಳಗೊಂಡ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಂದಾಜು 18 ಸಾವಿರ ಜನರಿಗೆ ಈ-ಸ್ವತ್ತು ಸಿಗಲಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಅಲುಮೇಲಮ್ಮ, ಸದಸ್ಯರಾದ ಎ.ಕುಮಾರ್, ಎಚ್.ಟಿ.ಪ್ರವೀಣ್, ರಾಜಪ್ಪ, ರಂಗಸ್ವಾಮಿ, ಡಿ.ಎಸ್.ಜ್ಯೋತಿ, ಪ್ರೇಮಲತಾ, ರೇಣುಕಮ್ಮ, ಶೋಭ, ರಾಜೇಶ್ವರಿ, ಎಂ.ಸಿದ್ದರಾಮಯ್ಯ, ಪಿಆರ್‌ಡಿ ಎಇಇ ಎಚ್.ದಯಾಶಂಕರ್, ಸಿಡಿಪಿಒ ಎನ್.ಚರಣ್‌ರಾಜ್, ನರೇಗಾ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎಸ್.ಮೋಹಿದ್ದೀನ್, ಎಂ.ಕರಿಯಪ್ಪ, ಕೆಂಪೇಗೌಡ, ಸುಶೀಲಮ್ಮ, ಎಲ್.ಆರ್.ಈಶ್ವರಯ್ಯ, ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಮತ್ತಿತರರಿದ್ದರು.