ನಾಡಹಬ್ಬ ದಸರಾ ಮಹೋತ್ಸವದ ಮೆರಗು ಹೆಚ್ಚಿಸಿ

mkg1a
Published on

ಹರಿಹರ: ದಸರಾ ಮಹೋತ್ಸವ ಸಮಿತಿಯಿಂದ ನಡೆಯುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸರ್ವರೂ ಪಾಲ್ಗೊಂಡು ಮೆರಗು ಹೆಚ್ಚಿಸಿ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

ನಗರದ ಶ್ರೀ ಓಂಕಾರ ಮಠದಲ್ಲಿ ದಸರಾ ಮಹೋತ್ಸವ ಸಮಿತಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದಸರಾ ಹಬ್ಬದ ಆಚರಣೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಸರಾ ಮಹೋತ್ಸವ ಸಮಿತಿಯವರು ಪ್ರತಿ ವರ್ಷ ದಸರಾ ಹಬ್ಬವನ್ನು ಹಲವು ಪೂಜಾ ವಿಧಿವಿಧಾನಗಳ ಕಾರ್ಯಕ್ರಮ ಆಯೋಜಿಸುವುದರ ಜತೆಗೆ ಬನ್ನಿ ಮುಡಿಯುವ ದಿನದಂದು ಅಂಬಾರಿ ಮೆರವಣಿಗೆ ಮೂಲಕ ತಾಲೂಕಿನಲ್ಲಿ ಹಬ್ಬದ ಮೆರಗನ್ನು ಹೆಚ್ಚಿಸಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ದಸರಾ ಮಹೋತ್ಸವ ಸಮಿತಿ ಪ್ರತಿ ವಷರ್ ಅಚ್ಚುಕಟ್ಟಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಬ್ಬ ಆಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಿತಿ ಅಧ್ಯಕ್ಷ ಶಂಕರ್ ಕಟಾವ್ಕಾರ್ ಮಾತನಾಡಿ, ಈ ಬಾರಿಯ 20ನೇ ದಸರಾ ಉತ್ಸವವು ಅ.15ರಿಂದ 24ರ ವರೆಗೆ ನಡೆಯಲಿದೆ. ಅ.24ಕ್ಕೆ ಸಾಮೂಹಿಕ ಬನ್ನಿ ಹಾಗೂ ಅದ್ದೂರಿ ಅಂಬಾರಿ ಮೆರವಣಿಗೆ ಜರುಗಲಿದೆ ಎಂದರು.

ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರೀ, ಸಿ.ಎನ್. ಹುಲಿಗೇಶ್, ಟಿ.ಜೆ. ಮುರುಗೇಶಪ್ಪ, ಅಜಿತ್‌ಸಾವಂತ್, ಹಲಸಬಾಳು ಬಸವರಾಜಪ್ಪ, ಐರಣಿ ನಾಗರಾಜ್, ಶಿವಪ್ರಕಾಶ್, ಪ್ರಕಾಶ್ ಕೋಳೂರು, ಎಚ್.ಕೆ. ಕೊಟ್ರಪ್ಪ, ರಮೇಶ್ ನಾಯ್ಕ, ಅಮರಾವತಿ ರೇವಣಸಿದ್ದಪ್ಪ, ಹರಿಶಂಕರ ಜೋಯಿಸರು, ಅಂಬಾಸ ಹಂಸಾಗರ, ವೆಂಕಟೇಶ್ ಶೆಟ್ಟಿ, ಜಿ.ಕೆ. ವೀರಣ್ಣ, ಪ್ರಕಾಶ್ ಶೆಟ್ಟಿ, ಶ್ರೀನಿವಾಸ್ ಮೆಹರ‌್ವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net