ನವಲಗುಂದದಲ್ಲಿ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆ

Congres Logo
Published on

ನವಲಗುಂದ: ಬೆಳಗಾವಿಯಲ್ಲಿ ಜ. 21ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್ ಜೈ ಸಂವಿಧಾನ ಬೃಹತ್ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆಯನ್ನು ಪಟ್ಟಣದ ಅಪ್ಪಾಜಿ ಗಾರ್ಡನ್​ನಲ್ಲಿ ಜ. 19ರಂದು ಮಧ್ಯಾಹ್ನ 3 ಗಂಟೆಗೆ ಕರೆಯಲಾಗಿದೆ.

ನವಲಗುಂದ ಹಾಗೂ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ, ಆರ್.ಎಚ್. ಕೋನರಡ್ಡಿ, ಸದಾಶಿವಗೌಡ ಪಾಟೀಲ, ಶಿವಾನಂದ ಬೂಮಣ್ಣವರ, ಶಾಂತಮ್ಮ ಗುಜ್ಜಳ, ನಂದಿನಿ ಹಾದಿಮನಿ, ಯಾಸ್ಮಿನ್ ಗುದಗಿ, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡರ ಹಾಗೂ ಮಂಜುನಾಥ ಮಾಯಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net