ಎಂಆರ್‌ಪಿಎಲ್‌ಗೆ ಪಿಆರ್‌ಸಿಐ ಪ್ರತಿಷ್ಠಿತ ಪ್ರಶಸ್ತಿ

mng_11nov MRPL
Published on

ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಲ್)ನ ಸಾಧನೆಯನ್ನು ಗುರುತಿಸಿ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್‌ಸಿಐ) ಒಟ್ಟು 8 ವಿಭಾಗದಲ್ಲಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸದೆ.

ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ(ಪಿಆರ್‌ಸಿಐ) ಮಂಗಳೂರಿನಲ್ಲಿ ಆಯೋಜಿಸಿದ 18ನೇ ಗ್ಲೋಬಲ್ ಕಮ್ಯುನಿಕೇಶನ್ ಕಾನ್‌ಕ್ಲೇವ್‌ನಲ್ಲಿ ಎಂಆರ್‌ಪಿಎಲ್‌ಗೆ Best Community Impact Communication, Internal Channel Award, Government Communication Films, Healthcare Communication Films, and Motivational Films ಸೇರಿದಂತೆ ಎಂಟು ವಿಭಾಗದಲ್ಲಿ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತದ ನಾಲ್ವರು ಮಾಜಿ ಪ್ರಧಾನಮಂತ್ರಿಗಳ ವಾರ್ತಾ ಸಲಹೆಗಾರರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ನರೇಂದ್ರ, ಕೇಂದ್ರ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್, ಎಡಿ ಫ್ಯಾಕ್ಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮದನ್ ಬೇಲ್, ನಿವೃತ್ತ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಪೋಷಕ ಎಂ.ಬಿ.ಜಯರಾಮ್, ಸಮ್ಮೇಳನದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಪಬ್ಲಿಕ್ ರಿಲೇಷನ್ ಆಫ್ ಇಂಡಿಯಾ ಅಧ್ಯಕ್ಷೆ ಗೀತಾ ಶಂಕರ್, ವೈಸಿಸಿ ಮುಖ್ಯಸ್ಥೆ ಚಿನ್ಮಯಿ ಪ್ರವೀಣ್ ಅವರ ಸಮ್ಮುಖದಲ್ಲಿ ಸಾರ್ವಜನಿಕ ಸಂಪರ್ಕ ಮತ್ತು ಸಂವಹನಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತ ಮತ್ತು ವಿದೇಶಗಳ ಹಲವಾರು ಸಾಧಕರನ್ನು ಗೌರವಿಸಲಾಯಿತು. ಎಂಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್ ಅವರು ಆಡಳಿತದಲ್ಲಿ ಶ್ರೇಷ್ಠತೆ ಪ್ರಶಸ್ತಿ ಸ್ವೀಕರಿಸಿದರು. ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ್ಯಾಂಡಿಂಗ್ ಮತ್ತು ಸಂವಹನಗಳ ಮುಖ್ಯ ಪ್ರಧಾನ ವ್ಯವಸ್ಥಾಪಕ ರುಡಾಲ್ಫ್ ನೊರೊನ್ಹಾ ಅವರನ್ನು ಕಾರ್ಪೊರೇಟ್ ಸಂವಹನದಲ್ಲಿ ಶ್ರೇಷ್ಠತೆಗಾಗಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net