ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥನೆ

7GKK1
Published on

ಗೋಕಾಕ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಅಂಗವಾಗಿ ಮುಸಲ್ಮಾನರು ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಕಲ ಜೀವರಾಶಿಗೆ ಒಳಿತಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿ, ರಂಗು ರಂಗಿನ ಟೋಪಿಗಳನ್ನು ತೊಟ್ಟು ಪ್ರಾರ್ಥನೆಗೆ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಿದರು. ಮೌಲ್ವಿ, ಧರ್ಮ ಗುರುಗಳ ಉಪದೇಶ ಆಲಿಸಿ ಹಬ್ಬ ಆಚರಿಸಿದರು. ಪ್ರಾರ್ಥನೆ ಬಳಿಕ ಒಬ್ಬರನೊಬ್ಬರು ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಅಮೀರಸಾಬ ಹಾಜಿ ಕುತಬುದ್ದೀನ್ ಬಸ್ಸಾಪೂರಿ, ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ್ ಗೋಕಾಕ, ನಗರಸಭೆ ಸದಸ್ಯರಾದ ಅಬ್ದುಲ್‌ರಹೆಮಾನ ದೇಸಾಯಿ, ಕುತುಬುದ್ದೀನ್ ಗೋಕಾಕ, ಇಲಾಹಿ ಖೈರದಿ, ಮಲ್ಲಿಕ ಪೈಲವಾನ್, ಇಸ್ಮಾಯಿಲ್ ಜಮಾದಾರ, ಇಸ್ಮಾಯಿಲ್ ಗೋಕಾಕ, ಮುಸ್ತಾಕ್ ಖಂಡಾಯತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net