ಶುಭ ಶುಕ್ರವಾರ ಪ್ರಯುಕ್ತ ಕ್ರೈಸ್ತರಿಂದ ಪ್ರಾರ್ಥನೆ

ಸಂತ ಮೇರಿ 1
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಹಾಗೂ ಮೇರಿ ಶಾಲಾವರಣದಲ್ಲಿ ಶುಭ ಶುಕ್ರವಾರದ ಹಿನ್ನೆಲೆ ಸೇರಿದ್ದ ಕ್ರೈಸ್ತರು.
Published on

ಸುಂಟಿಕೊಪ್ಪ: ಶುಭ ಶುಕ್ರವಾರದ ಅಂಗವಾಗಿ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು.

ಶಾಲಾ ಆವರಣದಲ್ಲಿರುವ ಚರ್ಚ್‌ನಲ್ಲಿ ಶುಭಶುಕ್ರವಾರದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಆರಾಧನೆ ನಡೆದವು. ಧರ್ಮಗುರುಗಳು ಹಾಗೂ ಮಹಿಳೆಯರು, ಸಮುದಾಯದ ನೂರಾರು ಜನರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಮಧ್ಯಾಹ್ನ 3 ಗಂಟೆಗೆ ದೇವಾಲಯದಿಂದ ಆರಂಭಗೊಂಡ ಶಿಲುಬೆಯಾದಿಯಲ್ಲಿ ಸಂತ ಅಂತೋಣಿ ಶಾಲಾವರಣದಿಂದ ಆರಂಭಗೊಂಡು ಸಂತಮೇರಿ ಕ್ರಿಸ್ತರ ಶಿಲುಬೆಯಾತನೆಯನ್ನು ಸ್ಮರಿಸಿದರು.

ಧರ್ಮಗುರು ರೇ. ಫಾ. ವಿಜಯಕುಮಾರ್, ಸಂತ ಕ್ಲಾರ ಕನ್ಯಾಸ್ತ್ರೀ ಕಾನ್ವೆಂಟಿನ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಕ್ರೈಸ್ತರು ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net