ಕಾಂಗ್ರೆಸ್ ಕಿಸಾನ್​ಸೆಲ್​ನಿಂದ ಕರೊನಾ ತೊಲಗಿಸಲು ಋಷ್ಯ ಶೃಂಗೇಶ್ವರನಿಗೆ 101 ತೆಂಗಿನಕಾಯಿ ಸೇವೆ

web 2
Published on

ಶೃಂಗೇರಿ: ಕರೊನಾದಿಂದ ಎಲ್ಲರೂ ಸಂಕಷ್ಟ ಅನುಭವಿಸುತ್ತಿರುವ ಕಾಲದಲ್ಲಿ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ದೇಶ ಸಾಮಾನ್ಯ ಸ್ಥಿತಿಗೆ ಮರಳಲಿ ಎಂಬ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದರು.

ಶುಕ್ರವಾರ ಕಿಗ್ಗಾದ ಶ್ರೀ ಋಷ್ಯಶೃಂಗೇಶ್ವರ ದೇವಾಲಯ ಮುಂಭಾಗದಲ್ಲಿ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ 58ನೇ ಜನ್ಮ ದಿನಾಚರಣೆ ಸಲುವಾಗಿ ವಿಭಿನ್ನವಾಗಿ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಕರೊನಾ ವೈರಸ್ ತೊಲಗಲಿ ಎಂದು ಕಿಸಾನ್ ಸೆಲ್​ನಿಂದ ಸ್ವಾಮಿ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದೇವೆ. ದೇವರ ಸನ್ನಿಧಿಯಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ಈಡೇರುತ್ತದೆ ಎಂಬ ನಂಬಿಕೆ ಇದೆ ಎಂದರು.

ಬೇಗಾರು ಗ್ರಾಪಂ ಸದಸ್ಯ ಲಕ್ಷಿ್ಮೕಶ್, ಕಿಗ್ಗಾ ಗ್ರಾಪಂ ಅಧ್ಯಕ್ಷ ವಿಠ್ಠಲ್, ಡಿಸಿಸಿ ಬ್ಯಾಂಕ್ ಸದಸ್ಯ ಪ್ರಜ್ವಲ್ ಶಾನುವಳ್ಳಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಉಪೇಂದ್ರ, ರೈತ ಮುಖಂಡ ಗೋಪಾಲ್ ನಾಯ್್ಕ ಬೇಗಾರ್ ವಿಎಸ್​ಎಸ್​ಎನ್ ಸತ್ಯನಾರಾಯಣ್, ಕಾಂಗ್ರೆಸ್ ಮುಖಂಡ ರಮೇಶ್ ಶೆಟ್ಟಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net