ಕೆ.ಎಂ.ದೊಡ್ಡಿಯಲ್ಲಿ ‘ಪ್ರಾರ್ಥನಾ ಸುಗ್ಗಿ ಹಬ್ಬ’

15KMD-1
ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ‘ಪ್ರಾರ್ಥನಾ ಸುಗ್ಗಿ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published on

 ಕೆ.ಎಂ.ದೊಡ್ಡಿ: ಇಲ್ಲಿನ ಪ್ರಾರ್ಥನಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ‘ಪ್ರಾರ್ಥನಾ ಸುಗ್ಗಿ ಹಬ್ಬ’ ಇತ್ತೀಚೆಗೆ ಆಯೋಜಿಸಲಾಗಿತ್ತು. ಭಾರತೀ ಕಾಲೇಜಿನ ಹಿರಿಯ ಗ್ರಂಥಪಾಲಕ ಎ.ಎಸ್. ಸಂಜೀವ್, ರಾಶಿ ಮತ್ತು ಗೋಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನಪದ ಶೈಲಿಯ ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನ ಹಬ್ಬಗಳ ಶೈಲಿಯನ್ನು ಮತ್ತೆ ಅನಾವರಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ರೈತರಿಗೆ ಸಂಕ್ರಾಂತಿ ಸುಗ್ಗಿ ಹಬ್ಬವಾಗಿದ್ದು, ತಾವು ಬೆಳೆದ ಬೆಳೆಯನ್ನು ಪೂಜೆ ಮಾಡುವ ಮೂಲಕ ಭೂತಾಯಿಗೆ ನಮನ ಸಲ್ಲಿಸಲಾಗುವುದು. ಹೆಣ್ಣು ಮಕ್ಕಳು ಎಳ್ಳು ಬೀರಿ ಒಳ್ಳೆ ಮಾತನಾಡಿ ಎಂಬ ಸಂದೇಶ ಸಾರುವ ಹಬ್ಬವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಹಬ್ಬ, ಸಂಸ್ಕೃತಿ ಪರಿಚಯಿಸಲು ಶಾಲೆಯಲ್ಲಿ ಸುಗ್ಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ಹಳ್ಳಿ ಶೈಲಿಯಲ್ಲೇ ಗುಡಿಸಲು ನಿರ್ಮಿಸಿ ಭತ್ತ, ರಾಗಿ ರಾಶಿ ಹಾಕಿ ಸೇರು, ಮೊರ, ಇಬ್ಬಳಿಗೆ, ಕೂಡುಗೋಲು ಸೇರಿದಂತೆ ರೈತರು ಬಳಸುವ ಸಾಮಾಗ್ರಿಗಳನ್ನು ಪೂಜಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಕ ಉಡುಗೆ ತೋಟ್ಟು ಗಮನ ಸೆಳೆದರು.

ಸಂಸ್ಥೆಯ ಅಧ್ಯಕ್ಷ ರವಿ ಸಾವಂದಿಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ಕಾರ್ಯದರ್ಶಿ ಪಿ.ಸೌಮ್ಯಾ ಕೃಷ್ಣ, ನಿರ್ದೇಕರಾದ, ವೈ.ಬಿ.ಶ್ರೀಕಂಠಸ್ವಾಮಿ, ರಘುವೆಂಕಟೇಗೌಡ, ಶಿಕ್ಷಕರಾದ ಎಸ್.ಬಿ.ಅಶ್ವಿನಿ, ಪಿ. ಸವಿತಾ, ಡಿ.ಎಂ.ಸ್ಮಿತಾ, ಆರ್.ರಮ್ಯಾ, ನವ್ಯಶ್ರೀ, ಕೆ.ಎನ್.ಪ್ರಿಯಾಂಕಾ, ಸುಷ್ಮಿತಾ, ರಚನಾ, ಕೆ.ಎನ್.ಅನುಪಮಾ, ಶ್ವೇತಾ, ಆಶಾ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net