

ಮುದಗಲ್: ಲೋಕಕಲ್ಯಾಣಾರ್ಥ ಕಾಡು ಚಿನ್ನಪ್ಪನ ಗುಡ್ಡದಲ್ಲಿ ಸೋಮವಾರ ಕ್ರೈಸ್ತ್ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೆಷ ಪೂಜೆ ನೆರವೇರಿಸಲಾಯಿತು.
ಅಲಂಕೃತ ವಾಹದಲ್ಲಿ ಯೇಸುಕ್ರಿಸ್ತನ ಭಾವಚಿತ್ರವಿಟ್ಟು ಪಟ್ಟಣದ ಪವಿತ್ರ ಹೃದಯ ದೇವಾಲಯದಿಂದ ಪ್ರಮುಖ ಬೀದಿಗಳ ಮೂಲಕ ಕಾಡು ಚಿನ್ನಪ್ಪನ ಗುಡ್ಡದವರೆಗೆ ಮೆರವಣಿಗೆ ನಡೆಸಲಾಯಿತ.
ನಂತರ ವಿಚಾರಣೆ ಗುರು ಫಾ.ಪೊನ್ನುಸ್ವಾಮಿ ಅವರು ಪ್ರವಚನ ಬೋಧಿಸಿದರು. ಶೈಕ್ಷಣಿಕ ವರ್ಷಕ್ಕೆ ಅಣಿಯಾಗಿರುವವ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಹಾಗೂ ಸಮೃದ್ಧ ಮಳೆ, ಬೆಳೆಯಾಗುವ ಮೂಲಕ ರೈತಾಪಿ ವರ್ಗ ಆರ್ಥಿಕ ಅಭಿವೃದ್ಧಿ ಹೊಂದಲಿ ಎಂದು ಪ್ರಾರ್ಥಿಸಿದರು.
ಸೆಕ್ರೆಡ್ ಹಾರ್ಟ್ ಚರ್ಚ್ ಶಾಲೆ ವ್ಯವಸ್ಥಾಪಕ ವಿಜಯಕುಮಾರ್ ಟಿ, ಫಾ.ಆರೋಗ್ಯ ನಾದನ್, ಫಾ. ಚಿನ್ನಪ್ಪ ಎಮ್ಮಿ, ಫಾ.ವಿಜಯ ಗಂಟಿಹಾಳ ಇತರರಿದ್ದರು.