ಸೈನಿಕರ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ

bir 1
Published on

ಬೀರೂರು: ಸೈನಿಕರು ನಡೆಸುತ್ತಿರುವ ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ಶ್ರೀರಾಮ ಮಂದಿರದ ಭಜನಾ ಬಳಗದಿಂದ ಮಾರ್ಗದ ಕ್ಯಾಂಪ್‌ನ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಕುಂಕುಮಾರ್ಚನೆ, ದೀಪಾರಾಧನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಯಾವುದೇ ಶಕ್ತಿಯಿಂದ ನಮ್ಮ ದೇಶವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸೈನಿಕರು ದೃಢಪಡಿಸಿದ್ದಾರೆ. ತಮ್ಮ ಜೀವವನ್ನು ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರು ಯಶಸ್ಸು ಕಂಡು ತಾಯಿ ಭಾರತಾಂಬೆಯ ಹೆಮ್ಮೆಯ ಮಕ್ಕಳಾಗಿ ಬರಲಿ ಮತ್ತು ಅವರಿಗೆ ಹೋರಾಡುವ ಶಕ್ತಿ ದೊರೆಯಲಿ ಎಂದು ದೇವಾಲಯದಲ್ಲಿ ಈ ವಿಶೇಷ ಪೂಜೆ ಏರ್ಪಡಿಸಲಾಗಿದೆ ಎಂದು ಭಜನಾ ಮಂಡಳಿ ಸದಸ್ಯೆ ಮಂಜುಳಾ ತಿಳಿಸಿದರು.

ಭಜನಾ ಮಂಡಳಿಯ ಜಯಶ್ರೀ, ಶಕುಂತಲಾ, ಶಂಕರಮ್ಮ, ಅನಿತಾ, ಸುಮಾ ಅಶೋಕ, ಶೋಭಾ, ವೀಣಾ ಉಮೇಶ್, ಸರಿತಾ, ಮೈತ್ರಿ, ರೂಪ, ಜಯಂತಿ, ನಳಿನ, ಮಮತಾ ಹಾಗೂ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net